ಧೋನಿ – ರೈನಾ ಒಟ್ಟೊಟ್ಟಿಗೆ ನಿವೃತ್ತಿ ಘೋಷಿಸಿಲು ಅಸಲಿ ಕಾರಣ ಏನ್ ಗೊತ್ತಾ? 7 & 3 = 73 ..!
ಇಡೀ ದೇಶ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿತ್ತು …. ಸ್ವಾತಂತ್ರ್ಯ ಹಬ್ಬವನ್ನು ಆಚರಿಸಿ ಸಂಜೆ ಹೊತ್ತು ಎಲ್ಲಾ ಅವರವರ ಪಾಡಿಗೆ ಅವರ ಕೆಲಸ – ಕಾರ್ಯಗಳು, ಫ್ಯಾಮಿಲಿ ಅಂತ ತಮ್ಮದೇಯಾದ ಗುಂಗು, ಆಲೋಚನೆ, ಯೋಚನೆ, ಭವಿಷ್ಯದ ಚಿಂತೆ – ಚಿಂತನೆಯಲ್ಲಿದ್ದರು ..! ಹೀಗಿದ್ದ ಮಂದಿ ಎಲ್ಲಾ ಏಕಾಏಕಿ ಒಂದೇ ಒಂದು ಸುದ್ದಿ ಕಡೆ ವಾಲಿದರು ..ಎಲ್ಲರೂ ಏಕಕಾಲದಲ್ಲಿ ಶಾಕ್ ಗೆ ಒಳಗಾದರು ..ಏನ್ ಗುರೂ ಇದು,ನಂಬಲಾಗ್ತಿಲ್ಲ ಅಂತ ಒಂದೇ ವಿಚಾರದ ಮಾತುಕತೆ , ಯೋಚನೆ, ಚರ್ಚೆಯಲ್ಲಿ ತೊಡಗಿದರು …ಮತ್ತೆ ಅರ್ಧಗಂಟೆಗೆ ಮತ್ತೊಂದು ಶಾಕಿಂಗ್ ಸುದ್ದಿ ..!
ಇಷ್ಟು ಓದಿದಾಗ ಖಂಡಿತಾ ಅರ್ಥವಾಗಿರುತ್ತೆ ನಾವ್ ಹೇಳ್ತಿರೋದು ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ನಿವೃತ್ತಿ ವಿಚಾರದ ಬಗ್ಗೆ ..!
ಹೌದು, ಸ್ವಾತಂತ್ರ್ಯ ದಿನಾಚರಣೆಯಂದು ರಾತ್ರಿ 7.29 ಕ್ಕೆ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ರು. ಮಿಸ್ಟರ್ ಕೂಲ್ ಕೂಲಾಗಿ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ನಿವೃತ್ತಿ ಘೋಷಿಸಿದ್ರು ..
ಅವರು ನಿವೃತ್ತಿ ಘೋಷಿಸಿ ಅರ್ಧಗಂಟೆ ಆಗುವಷ್ಟರಲ್ಲಿ , ಅಂದ್ರೆ 8 ಗಂಟೆ ಹೊತ್ತಿಗೆ ಸುರೇಶ್ ರೈನಾ ಕೂಡ ಧೋನಿಯಂತೇ ಇನ್ಸ್ಟಾಗ್ರಾಮ್ ನಲ್ಲಿ ನಿವೃತ್ತಿ ಘೋಷಿಸಿದ್ರು ..!
ಧೋನಿ ಮತ್ತು ರೈನಾ ದಿಢೀರ್ ನಿರ್ಧಾರ ಎಲ್ಲರನ್ನೂ ಅರೆಕ್ಷಣ ಮೌನಕ್ಕೆ ಜಾರುವಂತೆ ಮಾಡಿತು …ಆದರೆ ಅವರದ್ದು ದಿಢೀರ್ ನಿರ್ಧಾರವಲ್ಲ…
ಹೌದು ಧೋನಿ ಮತ್ತು ರೈನಾ ಮಾತಾಡಿಕೊಂಡು, ಯೋಚಿಸಿಯೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದಂತೆ..ಸ್ವಾತಂತ್ರ್ಯ ದಿನಾಚರಣೆ ದಿನ ನಿವೃತ್ತಿ ಘೋಷಿಸಿದರೆ ಸ್ಮರಣೀಯ ಮತ್ತು ಅರ್ಥಪೂರ್ಣ ಅಂತ ಈ ದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಸರಿಯುವ ನಿರ್ಧಾರ ಮಾಡಿದ್ರಂತೆ ..!
ಇನ್ನು ಒಂದೇ ದಿನ ನಿವೃತ್ತಿ ಘೋಷಿಸಿದ್ದಕ್ಕೆ ಕಾರಣ ನೋಡಿದ್ರಿ. ಎಂ ಎಸ್ ಧೋನಿ ಜರ್ಸಿ ನಂಬರ್ 7 , ಸುರೇಶ್ ರೈನಾ ಜರ್ಸಿ ನಂಬರ್ 3 ಎರಡನ್ನೂ ಸೇರಿಸಿದ್ರೆ 73 ..! ಭಾರತಕ್ಕೆ ಸ್ವಾತಂತ್ರ್ಯ ಬಂದು 73 ವರ್ಷ ತುಂಬುತ್ತದೆ ..! ಹಾಗಾಗಿ ಇಬ್ಬರೂ ಒಂದೇ ದಿನ…ಅದು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನಿವೃತ್ತಿ ಘೋಷಿಸಿದ್ದಾರೆ .. ಸುರೇಶ್ ರೈನಾ ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ.
ಧೋನಿ – ರೈನಾ ಒಟ್ಟೊಟ್ಟಿಗೆ ನಿವೃತ್ತಿ ಘೋಷಿಸಿಲು ಅಸಲಿ ಕಾರಣ ಏನ್ ಗೊತ್ತಾ? 7 & 3 = 73 ..!
100 + ವಯಸ್ಸಿನ ಅಜ್ಜಿ ಯೂಟ್ಯೂಬ್ ಸ್ಟಾರ್ ಆಗಿದ್ದು ಹೇಗೆ?
ಸ್ವರ ಸಾಮ್ರಾಟನ ಆರೋಗ್ಯ ಸ್ಥಿರ.. ಬೇಗ ಚೇತರಿಸಿಕೊಳ್ಳಿ ಎಂದು ರಜನಿ ಟ್ವೀಟ್..
ಧೋನಿ ನಿಭಾಯಿಸಿದ್ದ ಜವಬ್ದಾರಿ ಕನ್ನಡಿಗ ರಾಹುಲ್ ಹೆಗಲಿಗೆ..!
ಮಳೆಗಾಲದಲ್ಲಿ ತ್ವಚೆಯ ರಕ್ಷಣೆಗೆ ಮನೆಮದ್ದು.
ಸ್ವರ ಸಾಮ್ರಾಟನ ಆರೋಗ್ಯ ಸ್ಥಿರ.. ಬೇಗ ಚೇತರಿಸಿಕೊಳ್ಳಿ ಎಂದು ರಜನಿ ಟ್ವೀಟ್..