ನಂಗೆ ಕೋತಿ ಕಚ್ಚಿಲ್ಲ ಅಂದಿದ್ಹೇಕೆ ರೇಣುಕಾಚಾರ್ಯ?

Date:

ನಂಗೆ ಕೋತಿ ಕಚ್ಚಿಲ್ಲ ಅಂದಿದ್ಹೇಕೆ ರೇಣುಕಾಚಾರ್ಯ?

ನನಗೆ ಕೋತಿ ಕಚ್ಚಿಲ್ಲ, ಭಯದಿಂದ ಅದನ್ನು ಸೆರೆಹಿಡಿದು ಬೇರೆ ಕಡೆ ಸ್ಥಳಾಂತರಿಸಿಲ್ಲ ಎಂದು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು ಕೋತಿ ಕಚ್ಚಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಎಂದರು.
ಹೊನ್ನಾಳಿ ಪಟ್ಟಣದ ಸರಕಾರಿ ಆಸ್ಪತ್ರೆ ಆವರಣದಲ್ಲಿ ಶಾಸಕ ಎಂಪಿ.ರೇಣುಕಾಚಾರ್ಯ ಇದ್ದ ಗುಂಪಿನ ಮೇಲೆ ಮುಷ್ಯವೊಂದು ದಾಳಿ ನಡೆಸಿತ್ತು. ಈ ವೇಳೆ ಶಾಸಕರು ತಪ್ಪಿಸಿಕೊಂಡರೂ ಪೌರ ಕಾರ್ಮಿಕರಿಗೆ ಕೋತಿ ದಾಳಿಯಿಂದ ಗಾಯಗಳಾಗಿದೆ.
ಈ ಹಿಂದೆ ಹೋರಿಯಿಂದ ಗುದ್ದಿಸಿಕೊಂಡಿದ್ದ ರೇಣುಕಾಚಾರ್ಯ ಇದೀಗ ಕೋತಿ ಕಾಟದಿಂದ ಸುದ್ದಿಯಲ್ಲಿದ್ದರು. ಆದರೆ ಇದಕ್ಕೆ ಸ್ಪಷ್ಟೀಕರಣ ನೀಡಿದ ರೇಣುಕಾಚಾರ್ಯ, ಎರಡು ಮುಷ್ಯಗಳು ಎರಡು ತಿಂಗಳಿಂದ ತೊಂದರೆ ಕೊಡುತ್ತಿತ್ತು. ನೂರಾರು ಜನರಿಗೆ ಕಚ್ಚಿವೆ. ಈ ಪೈಕಿ ಒಂದನ್ನು ಸೆರೆಹಿಡಿಸಿದ್ದೆವು. ಆದರೆ ಒಂದು ಅಲ್ಲಿಂದ ತಪ್ಪಿಸಿಕೊಂಡಿದೆ.
ಮೊನ್ನೆ ಪಟ್ಟಣ ಪಂಚಾಯತ್ ನೌಕರರೊಂದಿಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಲ್ಲಿ ನಾನೂ ಹೋಗಿದ್ದೆ. ಅಲ್ಲಿ ಪಟ್ಟಣ ಪಂಚಾಯತ್‌ ಮೂರು ನೌಕರರ ಮೇಲೆ ದಾಳಿ ನಡೆಸಿತ್ತು. ಈ ಹಿಂದೆ ಈ ನೌಕರರು ಕೋತಿ ಮೇಲೆ ಹಲ್ಲೆ ನಡೆಸಿದ್ದರು. ಅದಕ್ಕಾಗಿ ಅವರನ್ನೇ ಹುಡುಕಿ ಕೋತಿ ದಾಳಿ ನಡೆಸಿದೆ.
ಆದರೆ ಮುಂಜಾಗರೂಕತಾ ಕ್ರಮವಾಗಿ ನಾನು ಆಸ್ಪತ್ರೆಯೊಳಗೆ ಉಳಿದುಕೊಂಡೆ ಅಷ್ಟೇ. ಬದಲಾಗಿ ನನ್ನ ಮೇಲೆ ಕೋತಿ ದಾಳಿ ನಡೆಲಿಲ್ಲ ಎಂದು ತಿಳಿಸಿದರು. ಒಟ್ಟಿನಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೋರಿ, ಕೋತಿ ಕಾಟದಿಂದ ಪದೇ ಪದೇ ಸುದ್ದಿಯಾಗುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ: ಹೆಚ್.ಡಿ. ಕುಮಾರಸ್ವಾಮಿ

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ: ಹೆಚ್.ಡಿ. ಕುಮಾರಸ್ವಾಮಿ ಮೈಸೂರು:...

ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ

ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ ಬೆಂಗಳೂರು: ಕರ್ನಾಟಕದಲ್ಲಿ...

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..?

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..? ನುಗ್ಗೆಕಾಯಿ (Drumstick)...

ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿಲ್ಲ: ಡಿ.ಕೆ. ಶಿವಕುಮಾರ್

ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿಲ್ಲ: ಡಿ.ಕೆ. ಶಿವಕುಮಾರ್ ನವದೆಹಲಿ: ನವೆಂಬರ್...