ಬೆಂಗಳೂರು: ರಾಜ್ಯ ಬಿಜೆಪಿಯ ಪ್ರಶ್ನಾತಿತ ನಾಯಕ ಯಡಿಯೂರಪ್ಪ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಜಭವನದಲ್ಲಿ ನಡೆದ ಸ್ವಾರಸ್ಯಕರ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ,ರಾಜ್ಯಪಾಲ ವಜುಬಾಯ್ ವಾಲಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಕ್ಷಿಯಾಗಿದ್ದಾರೆ. ಶುಕ್ರವಾರ ರಾಜಭವನದಿಂದ ತೆರಳುವಾಗ ಮೋದಿ ಹಾಗೂ ಯಡಿಯೂರಪ್ಪ ಸಮ್ಮುಖದಲ್ಲೇ ಉಪಚುನಾವಣೆಯ ಗೆಲುವಿನ ಬಗ್ಗೆ ವಜುಬಾಯ್ ವಾಲಾ ಪ್ರಸ್ತಾಪಿಸಿದ್ದರಂತೆ. ಈ ಪ್ರಸ್ತಾಪಕ್ಕೆ ಉತ್ತರಿಸಿದ ನರೇಂದ್ರ ಮೋದಿ I know yadiyurappa ಕೆಪಾಬಲಿಟಿ, ಫಲಿತಾಂಶ ವಂಡರ್ಫುಲ್ ಎಂದು ನಗುತ್ತಲೇ ಯಡಿಯೂರಪ್ಪರ ಕೈಕುಲುಕಿದ್ದಾರೆ ಎಂದು ವರದಿಯಾಗಿದೆ. ಹೈಕಮಾಂಡ್ನಿಂದ ಕಡೆಗಣನೆಗೆ ಒಳಗಾಗಿದ್ದ ಯಡಿಯೂರಪ್ಪ ಲೋಕಸಭೆ ಹಾಗೂ ಬೈ ಎಲಕ್ಷನ್ನಲ್ಲಿ ತಮ್ಮ ಶಕ್ತಿ ತೋರಿಸಿರುವುದೇ ಇದಕ್ಕೆ ಕಾರಣ ಎಂದು ರಾಜಕೀಯ ಚರ್ಚೆಗಳು ನಡೆಯುತ್ತಿದೆ.
ಸಿದ್ಧಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಎದುರೇ ಯಡಿಯೂರಪ್ಪ ನೆರೆಪರಿಹಾರ ಬರದಿರುವ ಬಗ್ಗೆ ನೇರವಾಗಿ ಅಸಮಾಧಾನ ಹೊರ ಹಾಕಿದ್ದರು. 50 ಸಾವಿರ ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಬೇಡಿಕೆಯನ್ನು ಮುಂದಿಟ್ಟಿದ್ದರು. ರಾಜಭವನಕ್ಕೆ ತೆರಳಿ ಅಲ್ಲಿಯೂ ಆಗ್ರಹಪೂರ್ವಕ ಮನವಿ ಸಲ್ಲಿಸಿದ್ದರು.
ನಂಗೆ ಯಡಿಯೂರಪ್ಪ ತಾಕತ್ತು ಗೊತ್ತು ಕಣ್ರೀ ಅಂದ್ರಂತೆ ಮೋದಿ!
Date: