ವಿಶ್ವ ಕ್ರಿಕೆಟ್ನ ಸ್ಟಾರ್ ಬ್ಯಾಟ್ಸ್ಮನ್ಗಳಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಅವರೇ ಟಾಪ್ನಲ್ಲಿರುವುದು..! ವಿಶ್ವ ಕ್ರಿಕೆಟಿನ ಘಟಾನುಘಟಿ ಬೌಲರ್ಗಳು ಈ ಇಬ್ಬರು ಬ್ಯಾಟ್ಸ್ಮನ್ಗಳಿಗೆ ಭಯ ಬೀಳ್ತಾರೆ. ಇವರಿಬ್ಬರ ವಿಕೆಟ್ ಕಿತ್ತರೆ ಸಾಕು ಪಂದ್ಯವನ್ನೇ ಗೆದ್ದ ಸಂಭ್ರಮ ಆ ಬೌಲರ್ & ಎದುರಾಳಿ ಟೀಮ್ ಗಳದ್ದು.
ಆದರೆ, ಈ ಇಬ್ಬರ ನಡುವೆಯೇ ಈಗ ಪೈಪೋಟಿ ಏರ್ಪಟ್ಟಿದೆ. ಇಬ್ಬರ ನಡುವೆ ಮನಸ್ತಾಪ ಇದೆ ಎಂಬ ಮಾತುಗಳಿಗೆ ಅವರಿಬ್ಬರೂ ಇಲ್ಲ ಎಂದರೂ ಹಾಗೊಂದು ಗಾಳಿ ಸುದ್ದಿ ನಿಜವೆಂಬತೆಯೇ ಇದೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20ತಯಲ್ಲಿ ಅತೀ ಹೆಚ್ಚು ಅರ್ಧ ಶತಕ ಬಾರಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಯೊಂದಿಗೆ ಟೂರ್ನಿಗೆ ಹೋಗಿದ್ದರು. 50+ (ಶತಕ + ಅರ್ಧಶತಕ) ದಲ್ಲಿ ವಿರಾಟ್ ಮತ್ತು ರೋಹಿತ್ ಶರ್ಮಾ ಸಮಾನ ಸ್ಥಾನದಲ್ಲಿದ್ದರು. ವಿರಾಟ್ 20 ಅರ್ಧಶತಕ ಮಾಡಿದ್ದರೆ, ರೋಹಿತ್ ಶರ್ಮಾ 16 ಅರ್ಧಶತಕ 4 ಶತಕದೊಂದಿಗೆ 20 ಬಾರಿ 50+ ರನ್ ಕಲೆ ಹಾಕಿದ್ದರು.
ವೆಸ್ಟ್ ಇಂಡೀಸ್ ವಿರುದ್ಧದ 2ನೇ ಪಂದ್ಯದಲ್ಲಿ ರೋಹಿತ್ ಶರ್ಮಾ 67ರನ್ ಮಾಡಿದ್ದರು. ಅದರೊಂದಿಗೆ ಅವರು 50+ ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಅವರನ್ನು ಹಿಂದಿಕ್ಕಿದ್ದರು. 3ನೇ ಪಂದ್ಯದಲ್ಲಿ ರೋಹಿತ್ ಗೆ ವಿಶ್ರಾಂತಿ ನೀಡಲಾಗಿತ್ತು. ನಿನ್ನೆ ನಡೆದ 3ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ 52 ರನ್ ಮಾಡಿದರು. ಈಗಾಗಿ ಇಬ್ಬರೂ 21 ಬಾರಿ 50+ ರನ್ ಮಾಡಿದಂತಾಗಿದೆ. ವಿರಾಟ್ 21 ಅರ್ಧ ಶತಕ ಮಾಡಿದ್ದರೆ, ರೋಹಿತ್ ಶರ್ಮಾ 17 ಅರ್ಧಶತಕ 4 ಶತಕ ಗಳಿಸಿದ್ದಾರೆ. ಹೀಗೆ ಈಗ ಇಬ್ಬರೂ 50+ ಗಳಿಕೆಯಲ್ಲಿ ನಂಬರ್ 1 ಪಟ್ಟವನ್ನು ಹಂಚಿಕೊಂಡಿದ್ದಾರೆ.