ನಕಲಿ ಖಾತೆಯಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ ನಟಿ ಹೆಸರಲ್ಲಿ ಹಣಕ್ಕೆ ಬೇಡಿಕೆ!

tnit editors
1 Min Read

ನಕಲಿ ಖಾತೆಯಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ ನಟಿ ಹೆಸರಲ್ಲಿ ಹಣಕ್ಕೆ ಬೇಡಿಕೆ!

ಬೆಂಗಳೂರು: ಆನ್‌ಲೈನ್‌ ಹ್ಯಾಕರ್‌ಗಳು ಸಿನಿಮಾ ನಟ-ನಟಿಯನ್ನು ಬಿಡುತ್ತಿಲ್ಲ. ಇದೀಗ ಹಿರೋಯಿನ್ ಹೆಸರಲ್ಲಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದ್ದು, ನಕಲಿ ನಂಬರ್ ತೆಗೆದುಕೊಂಡು ಅದಕ್ಕೆ ನಟಿ ಫೋಟೋ ಹಾಕಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಖ್ಯಾತ ನಟಿ ಶರಣ್ಯ ಶೆಟ್ಟಿ ಹೆಸರು ಬಳಸಿ‌ ವಂಚನೆ ಎಸಗಲಾಗಿದೆ. ಶರಣ್ಯ ಶೆಟ್ಟಿಯ DP ಯನ್ನು ಫೋಟೋಗೆ ಹಾಕಿಕೊಂಡು‌ ವಂಚನೆ ಎಸಗಲಾಗಿದ್ದು, ಸ್ವಲ್ಪ ಹಣದ‌ ಅವಶ್ಯಕತೆ ಇತ್ತು ಹೀಗಾಗಿ ಹಣ ಇದ್ದರೆ ಕಳಿಸಿ ಎಂದು ಮೆಸೇಜ್ ಹಾಕಿದ್ದಾರೆ.
ಬೇರೆ ನಕಲಿ‌ ನಂಬರ್ ಪಡೆದುಕೊಂಡು ಅದರಲ್ಲಿ ಶರಣ್ಯ ಶೆಟ್ಟಿಯ ಹೆಸರು ಬರುವಂತೆ ಮಾಡಿ ಕಿರಾತಕರು ಡಿ.ಪಿ ಹಾಕಿದ್ದಾರೆ. ನಂತರ ಇಂತಿಷ್ಟು ಹಣ ಬೇಕು ಎಂದು ಕೇಳಿ ವಂಚನೆ ಎಸಗಲಾಗಿದೆ. ಈ ಬಗ್ಗೆ ತಮ್ಮ ಅಸಲಿ ಖಾತೆಯಲ್ಲಿ ನಟಿ‌ ಶರಣ್ಯ ಬರೆದುಕೊಂಡಿದ್ದು, ಇದೊಂದು ನಕಸಿ‌ ವಾಟ್ಸ್ ಅಪ್ ಅದನ್ನು ನಂಬಿ ಯಾರು ಹಣ ಕಳಿಸಬೇಡಿ. ಅಂತಹ ಖದೀಮರ ವಿರುದ್ಧ ನಾನು ಸೈಬರ್ ಕ್ರೈಂ ನಲ್ಲಿ ದೂರು‌ ನೀಡುತ್ತೇನೆ ಎಂದು ನಟಿ ಹೇಳಿದ್ದಾರೆ.

Share This Article