ನಟಿ ರನ್ಯಾರಾವ್ ಗೆ ಮತ್ತೊಂದು ಬಿಗ್ ಶಾಕ್: 34.12 ಕೋಟಿ ಮೌಲ್ಯದ ಆಸ್ತಿ ಜಪ್ತಿ!
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲುಪಾಲಾಗಿರುವ ನಟಿ ರನ್ಯಾಗೆ ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ರನ್ಯಾ ರಾವ್ಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ತುಮಕೂರಿನಲ್ಲಿರುವ ಒಟ್ಟು 34.12 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿದೆ. ವಿಕ್ಟೋರಿಯಾ ಲೇಔಟ್ ಮನೆ, ಅರ್ಕಾವತಿ ಲೇಔಟ್ ನ ಪ್ಲಾಟ್, ಶಿರಾದ ಇಂಡಸ್ಟ್ರಿಯಲ್ ಲ್ಯಾಂಡ್, ಆನೇಕಲ್ ನ ಕೃಷಿ ಭೂಮಿ ಸೇರಿದಂತೆ 34.12 ಕೋಟಿ ರೂ. ಆಸ್ತಿಯನ್ನು ಇಡಿ ವಶಕ್ಕೆ ಪಡೆದಿದೆ. ರನ್ಯಾಗೆ ಸೇರಿದ 34.12 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನಕಲಿ ದಾಖಲೆಗಳನ್ನ ಸೃಷ್ಟಿಸಿ ಚಿನ್ನ ಕಳ್ಳಸಾಗಣೆ ಮಾಡ್ತಿದ್ದ ರನ್ಯಾರಾವ್ ಹವಾಲಾ ದಂಧೆ ನಡೆಸುತ್ತಿರೋದು ಇಡಿ ತನಿಖೆಯಲ್ಲಿ ಧೃಢಪಟ್ಟಿದೆ. ಈ ಬೆನ್ನಲ್ಲೇ ಆಸ್ತಿಯನ್ನು ಜಪ್ತಿ ಮಾಡಿದೆ.