ನಟಿ ಶೋಭಿತಾ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ಲೆಟರ್ ಪತ್ತೆ!
‘ಎರಡೊಂದ್ಲಾ ಮೂರು’, ‘ಒಂದ್ ಕಥೆ ಹೇಳಾ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಶೋಭಿತಾ ಶಿವಣ್ಣ ನಿಧನರಾಗಿದ್ದಾರೆ. ‘ಬ್ರಹ್ಮಗಂಟು’ ಸೀರಿಯಲ್ ಮೂಲಕ ಅವರು ಖ್ಯಾತಿ ಪಡೆದಿದ್ದರು. ಆತ್ಮಹತ್ಯೆ ಮಾಡಿಕೊಂಡು ಅವರು ಸಾವಿಗೀಡಾಗಿದ್ದಾರೆ. ಇನ್ನೂ ನಟಿ ಶೋಭಿತಾ ಶಿವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಸೈಡ್ ಲೇಟರ್ ಸಿಕ್ಕಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.ಸೂಸೈಡ್ ಲೆಟರ್ ನಲ್ಲಿ ‘ನೀನು ಸಾಯಬಹುದು ಅಂದ್ರೆ ನೀನು ಸಾಯಬಹುದು’ ಎಂದು ಬರೆಯಲಾಗಿದೆ. ‘ಜೀವನದಲ್ಲಿ ಎಲ್ಲವೂ ಪೆರ್ಫೆಕ್ಟ್ ಆಗಿದೆ’ ಎಂದು ಬರೆಯಲಾಗಿದೆ.
ಇದರ ಅರ್ಥಕ್ಕಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೆರೆ ಹೊರೆಯವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ‘ಶೋಭಿತಾ ಸಾವಿಗೆ ಖಿನ್ನತೆ ಕಾರಣವೇ? ಪತಿಯೊಂದಿಗೆ ಭಿನ್ನಾಭಿಪ್ರಾಯ ಇತ್ತೇ’ ಎಂಬ ನಿಟ್ಟಿನಲ್ಲೂ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಸದ್ಯ ಹೈದರಾಬಾದ್ನಲ್ಲಿ ಶೋಭಿತಾ ಮೃತದೇಹ ಇದೆ. ಈಗಾಗಲೇ ಮರಣೋತ್ತರ ಪರೀಕ್ಷೆ ಕೂಡ ಆಗಿದೆ.