ನಟಿ ಸಂಜನಾ ಗಲ್ರಾನಿಗೆ ವಂಚನೆ ಕೇಸ್: ಅಪರಾಧಿಗೆ ಶಿಕ್ಷೆ ಪ್ರಕಟ – 61.50 ಲಕ್ಷ ದಂಡ, 6 ತಿಂಗಳು ಜೈಲು!

Date:

ಬೆಂಗಳೂರು:- ನಟಿ ಸಂಜನಾ ಗಲ್ರಾನಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 33ನೇ ಎಸಿಜೆಎಂ ನ್ಯಾಯಾಲಯವು ಅಪರಾಧಿಗೆ 61.50 ಲಕ್ಷ ದಂಡ ಹಾಗೂ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಅಪರಾಧಿ ಆಗಿರುವ ರಾಹುಲ್ ತೋನ್ಸೆ ಅಲಿಯಾಸ್ ರಾಹುಲ್ ಶೆಟ್ಟಿ, 2018-19ರಲ್ಲಿ ಸಂಜನಾ ಗಲ್ರಾನಿ ಅವರಿಂದ ₹45 ಲಕ್ಷ ಪಡೆದು ವಂಚಿಸಿದ್ದ ಆರೋಪವಿತ್ತು. ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಇದೀಗ ಅಪರಾಧ ಸಾಬೀತಾಗಿರುವ ಹಿನ್ನೆಲೆ ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಿದೆ.

ದಂಡದ ಮೊತ್ತದಲ್ಲಿ ₹10 ಸಾವಿರ ಕೋರ್ಟ್ ಶುಲ್ಕವನ್ನು ಕಡಿತಗೊಳಿಸಿ ಉಳಿದ ₹61.40 ಲಕ್ಷವನ್ನು ದೂರುದಾರೆ ಸಂಜನಾಗೆ ನೀಡಬೇಕು. ನಿಗದಿತ ಸಮಯದಲ್ಲಿ ದಂಡದ ಮೊತ್ತವನ್ನು ಪಾವತಿ ಮಾಡಿದರೆ 6 ತಿಂಗಳ ಶಿಕ್ಷೆಯನ್ನು ಮಾಫಿ ಮಾಡಲಾಗುತ್ತದೆ. ಇಲ್ಲವಾದರೆ, 6 ತಿಂಗಳು ಜೈಲು ಮತ್ತು ದಂಡವನ್ನು ಪಾವತಿ ಮಾಡಬೇಕೆಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಘಟನೆ ಹಿನ್ನೆಲೆ:-

ಅಪರಾಧಿ ರಾಹುಲ್ ತೋನ್ಸೆ ಗೋವಾ ಮತ್ತು ಕೊಲಂಬೋದಲ್ಲಿ ಕ್ಯಾಸಿನೋಗಳ ವ್ಯವಸ್ಥಾಪಕ ನಿರ್ದೇಶಕನಾಗಿದ್ದಾನೆ. ಈತ ಸಂಜನಾಗೆ ನಾನು ಹೇಳಿದ ಕಡೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಸಿಗಲಿದೆ ಎಂದು ಹೇಳಿದ್ದ.

ರಾಹುಲ್‌ ಮಾತು ಕೇಳಿ 2018-19 ರಲ್ಲಿ 45 ಲಕ್ಷ ರೂ.ಗಳನ್ನು ಸಂಜನಾ ಹೂಡಿಕೆ ಮಾಡಿದ್ದರು. ಆದರೆ ನಂತರ ಯಾವುದೇ ವ್ಯವಹಾರ ಆಗದೇ ವಂಚನೆ ಮಾಡಿದ್ದ. ನಂತರ ಹೂಡಿಕೆ ಮಾಡಿದ್ದ ಹಣವನ್ನು ಮರಳಿಸುವಂತೆ ಒತ್ತಾಯ ಮಾಡಿದರೂ ರಾಹುಲ್‌ ಎರಡು ಚೆಕ್ ನೀಡಿದ್ದ. ಚೆಕ್‌ನಿಂದಲೂ ಹಣ ವಾಪಸ್ ಆಗದ ಹಿನ್ನೆಲೆ ಸಂಜನಾ ಇಂದಿರಾನಗರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು.

Share post:

Subscribe

spot_imgspot_img

Popular

More like this
Related

ರಾಯಚೂರು: ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ!

ರಾಯಚೂರು: ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ! ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ...

ಹಣಕಾಸು ವಿಚಾರಕ್ಕೆ ಯುವಕನ ಬರ್ಬರ ಹತ್ಯೆ! ಸಾಕ್ಷ್ಯವೇ ಸಿಗದಂತೆ ಶವ ಸುಟ್ಟು ಹಾಕಿದ ದುಷ್ಕರ್ಮಿಗಳು

ಹಣಕಾಸು ವಿಚಾರಕ್ಕೆ ಯುವಕನ ಬರ್ಬರ ಹತ್ಯೆ! ಸಾಕ್ಷ್ಯವೇ ಸಿಗದಂತೆ ಶವ ಸುಟ್ಟು...

ಇರಾನ್ ದಾಳಿ ಶಂಕೆ: ಅಮೆರಿಕದ F-35 ಯುದ್ಧವಿಮಾನ ತುರ್ತು ಲ್ಯಾಂಡಿಂಗ್

ಇರಾನ್ ದಾಳಿ ಶಂಕೆ: ಅಮೆರಿಕದ F-35 ಯುದ್ಧವಿಮಾನ ತುರ್ತು ಲ್ಯಾಂಡಿಂಗ್ ಟೆಹ್ರಾನ್: ಇರಾನ್...

ಯುಗಾದಿ ಹೊಸತೊಡಕು ಜೋರು: ಮಾಂಸದಂಗಡಿ ಮುಂದೆ ಕ್ಯೂ ನಿಂತ ಜನರು!

ಯುಗಾದಿ ಹೊಸತೊಡಕು ಜೋರು: ಮಾಂಸದಂಗಡಿ ಮುಂದೆ ಕ್ಯೂ ನಿಂತ ಜನರು! ಬೆಂಗಳೂರು: ಯುಗಾದಿ...