ನಟ ದರ್ಶನ್ʼಗೆ ಎದುರಾಗಲಿದೆ ಮತ್ತಷ್ಟು ಸಂಕಷ್ಟ: ಮತ್ತೆರಡು ಫೋಟೋ ರಿಟ್ರೀವ್..!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ಆಗಿರುವ ನಟ ದರ್ಶನ್ ಸದ್ಯ ಮೆಡಿಕಲ್ ಬೇಲ್ ಪಡೆದು ಹೊರಗೆ ಬಂದಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬೇಲ್ ಅರ್ಜಿ ವಿಚಾರಣೆ ವೇಳೆ ದರ್ಶನ್ ಪರ ವಕೀಲರು ಕೋರ್ಟ್ ನಟನ ವೈದ್ಯಕೀಯ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಆದ್ರೆ ಇದರ ಮದ್ಯೆ ಕೋರ್ಟ್ಗೆ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಕೆ ಮಾಡುವುದರಿಂದ ರೇಣುಕಾಸ್ವಾಮಿ ಪ್ರಕರಣದ ಎಲ್ಲ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗಲಿದೆ.
ಹೌದು ಘಟನೆ ನಡೆದ ಶೆಡ್ನ ಸ್ಥಳದಲ್ಲಿನ ಕ್ಲಿಕ್ ಮಾಡಿದಂತ ಎರಡು ಫೋಟೋಗಳನ್ನು ಪೊಲೀಸರು ರಿಕವರಿ ಮಾಡಿದ್ದಾರೆ. ಪ್ರತ್ಯಕ್ಷದರ್ಶಿ ಪುನೀತ್ ಮೊಬೈಲ್ನಲ್ಲಿದ್ದ ಎರಡು ಫೋಟೋಗಳನ್ನು ಭಯದಿಂದ ಡಿಲೀಟ್ ಮಾಡಿದ್ದರು. ಆದರೆ ಈ ಫೋಟೋಗಳನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ.
ದೋಷಾರೋಪ ಪಟ್ಟಿಯಲ್ಲಿ ಈ 2 ಫೋಟೋಗಳು ಸೇರಿವೆ. ದರ್ಶನ್ ಅವರು ಬ್ಲೂ ಟೀ-ಶರ್ಟ್ ಹಾಗೂ ಕಪ್ಪು ಕಲರ್ ಜೀನ್ಸ್ ಧರಿಸಿಕೊಂಡು ಶೆಡ್ನಲ್ಲಿ ಎಲ್ಲರ ಜೊತೆ ನಿಂತಿದ್ದಾರೆ. ಎಂದು ತಿಳಿದು ಬಂದಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11 ರಂದು ದರ್ಶನ್ ಬಂಧನವಾಗಿತ್ತು. ಐದು ತಿಂಗಳ ಕಾಲ ಜೈಲಿನಲ್ಲಿ ಕಳೆದ ದರ್ಶನ್ಗೆ ಮೂರು ವಾರಗಳ ಹಿಂದಷ್ಟೆ ಮಧ್ಯಂತರ ಜಾಮೀನು ನೀಡಲಾಗಿದೆ.