ನಟ ದರ್ಶನ್ ಗೆ ಆಪರೇಷನ್ ಡೇಟ್ ಫಿಕ್ಸ್! ಯಾವಗ ಗೊತ್ತಾ..?
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರು ತಿಂಗಳು ಜೈಲು ಸೇರಿ ಇತ್ತೀಚಿಗೆ ರೆಗ್ಯುಲರ್ ಜಾಮೀನು ಪಡೆದ ನಟ ದರ್ಶನ್, ತಮ್ಮ ಮುಂದಿನ ‘ಡೆವಿಲ್’ ಚಿತ್ರದ ಕೆಲಸವನ್ನು ಪುನರ್ ಆರಂಭಿಸಿದ್ದಾರೆ. ಆದ್ರೆ ಬೆನ್ನುನೋವು ಸಮಸ್ಯೆಯಿಂದಾಗಿ ಕೆಲಸವನ್ನು ಮಾಡಲು ಆಗುತ್ತಿಲ್ಲ. ಸದ್ಯ ದರ್ಶನ್ ಆಪರೇಷನ್ ಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆನ್ನುನೋವು ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿದ್ದ ಅವರು ಆಪರೇಷನ್ ಮಾಡಿಸಬೇಕೆ, ಬೇಡವೇ ಎಂಬ ಗೊಂದಲದಲ್ಲಿದ್ದರು. ಈಗ ಆಪರೇಷನ್ ಮಾಡಿಸೋದು ಅನಿವಾರ್ಯ ಆಗಿದೆ. ಅವರಿಗೆ ಬೆನ್ನು ನೋವು ವಾಸಿಯಾಗುವ ಲಕ್ಷಣ ಕಾಣುತ್ತಿಲ್ಲ.
ಹೀಗಾಗಿ, ಬೇರೆ ದಾರಿ ಕಾಣದೆ ಆಪರೇಷನ್ಗೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಕ್ರಾತಿ ವೇಳೆಗೆ ದರ್ಶನ್ ಆಪರೇಷನ್ ಮಾಡಿಸಿಕೊಳ್ಳಲಿದ್ದಾರೆ. ಮೈಸೂರಿನಲ್ಲಿಯೇ ಆಪರೇಷನ್ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.