ನಟ ದರ್ಶನ್ ಪಾಲಿಗೆ ಇವತ್ತು ಬಿಗ್ ಡೇ: ಸುಪ್ರೀಂ ಕೋರ್ಟ್’ನಲ್ಲಿ ಜಾಮೀನು ಭವಿಷ್ಯ
ನವದೆಹಲಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ಗೆ ಹೈಕೋರ್ಟ್ ನೀಡಿದ್ದ ಜಾಮೀನು ತಾತ್ಕಾಲಿಕವಾಗಿದ್ದರೂ, ಅದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈಗ ಆ ಅರ್ಜಿ ವಿಚಾರಣೆ ಇವತ್ತು ನಿರ್ಣಾಯಕ ಹಂತಕ್ಕೆ ಬಂದಿದೆ.
ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹೈಕೋರ್ಟ್ ನೀಡಿದ್ದ ಜಾಮೀನಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರು, “ಈ ಜಾಮೀನು ಆದೇಶ ಸರಿಯಾಗಿ ನೀಡಲಾಗಿದೆಯೆ ಎಂಬುದರ ಮೇಲೆ ಗಂಭೀರ ಅನುಮಾನವಿದೆ” ಎಂದು ಹೇಳಿದ್ದರು.
ದರ್ಶನ್ ಪರ ವಕೀಲರು ಇಂದು ತಮ್ಮ ವಾದ ಮಂಡಿಸಲಿದ್ದಾರೆ. ಎಲ್ಲಾ ವಾದಗಳ ನಂತರ, ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ದರ್ಶನ್ ಜಾಮೀನು ಮುಂದುವರಿಯುತ್ತದೆಯೆ ಅಥವಾ ರದ್ದಾಗುತ್ತದೆಯೆ ಎಂಬುದರ ಮೇಲೆ ಇವತ್ತು ಸ್ಪಷ್ಟತೆ ಸಿಗಲಿದೆ. ರೇಣುಕಾಸ್ವಾಮಿ ಎಂಬ ಯುವಕನನ್ನು ಹತ್ಯೆ ಮಾಡಿದ ಆರೋಪದಲ್ಲಿ, ದರ್ಶನ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದರು.