ನಟ ದರ್ಶನ್ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ

Date:

ಕಾಟೇರ’ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಅವಧಿ ಮೀರಿ ಬೆಳಗಿನ ಜಾವದವರೆಗೆ ಚಿತ್ರತಂಡ ಪಾರ್ಟಿ ಮಾಡಿದ್ದರು ಎಂಬ ಆರೋಪ ಕೇಳಿಬಂದಿದ್ದು ನಟ ದರ್ಶನ್‌ & ಟೀಂ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ನಟ ದರ್ಶನ್‌ ಪರ ಕಾಂಗ್ರೆಸ್‌ ಶಾಸಕ ರವಿಕುಮಾರ್‌ ಗೌಡ ಬ್ಯಾಟ್‌ ಬೀಸಿದ್ದಾರೆ.

ಸ್ಟಾರ್ಸ್ ಗಳು ಅವಧಿ ಮೀರಿ ಪಾರ್ಟಿ ಮಾಡಿದ ವಿಚಾರವಾಗಿ ನಟರನ್ನ ಸ್ಟೇಷನ್ ಗೆ ಕರೆಸಿದ ಪೊಲೀಸರೇ ತಪ್ಪಿತಸ್ಥರು ಎಂದು ಮಂಡ್ಯ ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿಕೆ ನೀಡಿದ್ದಾರೆ.ಇಡೀ ಏಷ್ಯಾದಲ್ಲಿ ಅತಿ ಹೆಚ್ಚು ಸೆಕ್ಯೂರಿಟಿ ಬೆಂಗಳೂರಲ್ಲಿ ಇದೆ 20 ಸಾವಿರ ಪೊಲೀಸ್ ಅಧಿಕಾರಿಗಳು ಇದ್ದಾರೆ. ರಾತ್ರಿಯೆಲ್ಲಾ ಪೊಲೀಸರು ರೋಡಲ್ಲಿ ಬೀಟ್ ಹಾಕ್ತಾರೆ , ಜೆಟ್ ಲಾಗ್ ಇರೋದು ಜನ ಸಂದಣಿ ಇರೋ ಪ್ರದೇಶದಲ್ಲಿದೆ. ಮುಂಬೈ ಹೋಗುವ ರೋಡಲ್ಲಿ ಇದೆ ಈ ಪಬ್, ಮೂರು ಗಂಟೆಗೆ ಪೊಲೀಸರು ಹೋಗಿದ್ದಾರೆ ಅಂತಾರೆ ಇಲ್ಲಿ ಒಂದು ಗಂಟೆ ವರೆಗೆ ಮಾತ್ರ ಪರ್ಮಿಶನ್ ಇದೆ ಬೆಳಿಗ್ಗಿನ ಜಾವ 3.30 ವರೆಗೂ ಓಪನ್ ಮಾಡಲು ಅವರಿಗೆ ಅನುಮತಿ ಕೊಟ್ಟಿರಿವವರು ಯಾರು..? ಆದ್ರೂ ಈ ಪಬ್ ಅನ್ನು ಓಪನ್ ಇಡೋದಕ್ಕೆ ಬಿಟ್ಟಿದ್ಯಾರು..

ಈ ನೆಲದ ನಟರಿಗೆ ನೋಟಿಸ್ ಕೊಟ್ಟಿದ್ಯಾಕೆ*ಎಸಿಪಿ‌, ಡಿಸಿಪಿ,ಇನ್ಸ್ಪೆಕ್ಟರ್ ಇದಕ್ಕೆ ಉತ್ತರ ಕೊಡ್ಬೇಕು ಪೊಲೀಸರು ರೋಲ್ ಕಾಲ್ ಮಾಡಿ ಓಪನ್ ಮಾಡಲು ಬಿಟ್ಟಿದ್ದಾರಾ..?
ನೀವು ಅಲ್ಲಿ ಹೋಗಿದ್ದರೆ ವಿಡಿಯೋ ರಿಲೀಸ್ ಮಾಡಿ ಅವ್ರ ತಪ್ಪನ್ನ ಮುಚ್ಚಿಸೋಕೆ ಇವ್ರ ಮೇಲೆ ಹಾಕಿದ್ದಾರೆ ನಿಮಗೂ ಆ ಪಬ್‌ ಅವ್ರಿಗೂ ಏನ್ ಅಡ್ಜೆಸ್ಮೆಂಟ್ ಇದೆ ನಾನು ಗೃಹ ಸಚಿವರಿಗೆ ಮನವಿ ಮಾಡ್ತೇನೆ ಗ್ರಾಹಕರಿಗೆ ನೋಟಿಸ್ ಕೊಡೋದು ಎಷ್ಟು‌ ಸರಿ. ಚಲನ ಚಿತ್ರ ನಟರು ಈ ನೆಲದ ಆಸ್ತಿ. ಪಬ್ ಬಾರ್ ಜೊತೆ ಅಡ್ಜೆಸ್ಮೆಂಟ್ ಮಾಡ್ಕೊಂಡು ಗ್ರಾಹಕರಿಗೆ ನೋಟಿಸ್ ಕೊಟ್ಟಿದ್ದಾರೆ‌ ಇಲ್ಲಿ ಪ್ರಮುಖವಾಗಿ ಪೊಲೀಸರದ್ದೆ ತಪ್ಪು ದರ್ಶನ್ ,ಡಾಲಿ ಎಲ್ಲರನ್ನೂ ಪೊಲೀಸ್ ಠಾಣೆಗೆ ಕರೆಸಿದ್ದು ತಪ್ಪು 24 ಗಂಟೆಯೊಳಗೆ ಸಂಬಂಧಪಟ್ಟ ಪೊಲೀಸರು ಸಸ್ಪೆಂಡ್ ಆಗಬೇಕು ಇಲ್ಲದ್ದಿದ್ರೆ ನಾನೇ ಗೃಹ ಸಚಿವರನ್ನ ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ ಎಂದು ಶಾಸಕ ರವಿ ಕುಮಾರ್‌ ಕಿಡಿ ಕಾರಿದ್ದಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...