ಚಾಲೆಂಜಿಂಗ್ ಸ್ಟಾರ್ ದರ್ಶನ್ ನನ್ನಂಥಾ ಕಚಡ ಇನ್ನೊಬ್ಬ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ.
ಸುಮಲತಾ ಅವರ ಸಮಾವೇಶದಲ್ಲಿ ಮಾತನಾಡಿದ ದರ್ಶನ್, ತಮ್ಮ ವಿರುದ್ಧದ ಟೀಕೆಗಳಿಗೆ ಪ್ರತಿಕ್ರಿಯಿಸುತ್ತಾ ಇಂದು ಎಲ್ಲದಕ್ಕೂ ಲೆಕ್ಕ ಕೊಡುತ್ತೇನೆ. ನನ್ನಂಥಾ ಕಚಡ ಇನ್ನೊಬ್ಬ ಇಲ್ಲ. ಯಾರ ಮನೆಯಲ್ಲಿ ಗಲಾಟೆ ಆಗಲ್ಲ. ಅದೇ ವಿಚಾರವನ್ನು ಇಟ್ಟುಕೊಂಡು ಮಾತನಾಡುತ್ತಾರೆ. ಅವರ ಮನೆಯಲ್ಲಿ ಗಲಾಟೆ ಆಗಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಫಾರ್ಮ್ ಹೌಸ್ ನಲ್ಲಿ ಸಿಕ್ಕಿರುವ ಡೈರಿಯಲ್ಲಿ ಹಾಲಿನ ಲೆಕ್ಕ ಇಂಜೆಕ್ಷನ್ ಲೆಕ್ಕ ಇರುತ್ತೆ ಎಂದು ಟಾಂಗ್ ನೀಡಿದರು. ನಮಗೆ ರೈತರ ಕಟ್ಟ ಗೊತ್ತಿದೆಯೇ ಎಂದು ಕೇಳುವವರು ಒಂದು ಲೋಟ ಹಾಲು ಕರೆದು ತೋರಿಸಲಿ. ಹಸು ಕರು ಹಾಕಿದಾಗ ಯಾವ ಮೇವು ಕೊಡಬೇಕು ಎಂದು ಹೇಳಲಿ ಎಂದು ಚಾಟಿ ಬೀಸಿದರು.
ನಾನು ಕುಮಾರಣ್ಣಗೆ ಥ್ಯಾಂಕ್ಸ್ ಹೇಳುತ್ತೇನೆ. 100ರಲ್ಲಿ 10 ಜನ ಡಿ ಬಾಸ್ ಎಂದು ಕರೆಯುತ್ತಿದ್ದರು. ಕುಮಾರಣ್ಣನಿಂದ ಇಡೀ ಕರ್ನಾಟಕ ಡಿ ಬಾಸ್ ಎನ್ನುತ್ತಿದೆ ಎಂದರು.
ನನ್ನಂಥಾ ಕಚಡ ಇನ್ನೊಬ್ಬರಿಲ್ಲ ಎಂದ ದರ್ಶನ್ ಕುಮಾರಸ್ವಾಮಿಗೆ ಧನ್ಯವಾದ ಹೇಳಿದ್ರು..!
Date: