ನನ್ನ ಹೆಸರಿಗೆ ಮಸಿ ಬಳಿಯುವ ದುರುದ್ದೇಶ ಬಿಜೆಪಿ-ಜೆಡಿಎಸ್‌ನದ್ದಾಗಿದೆ: ಸಿಎಂ ಸಿದ್ದರಾಮಯ್ಯ

tnit editors
1 Min Read

 

ಮೈಸೂರು: ನನ್ನ ಹೆಸರಿಗೆ ಮಸಿ ಬಳಿಯುವ ದುರುದ್ದೇಶ ಬಿಜೆಪಿ-ಜೆಡಿಎಸ್‌ನದ್ದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನನ್ನ 4 ದಶಕಗಳ ರಾಜಕೀಯ ಜೀವನ ತೆರೆದ ಪುಸ್ತಕ. ನನ್ನ ಹೆಸರಿಗೆ ಮಸಿ ಬಳಿಯುವ ದುರುದ್ದೇಶ ಬಿಜೆಪಿ-ಜೆಡಿಎಸ್‌ನದ್ದಾಗಿದೆ. ಅವರ ಈ ಪ್ರಯತ್ನ ವಿಫಲವಾಗುತ್ತೆ. ನಾನು 2 ಬಾರಿ ಮುಖ್ಯಮಂತ್ರಿಯಾಗಿದ್ದೇನೆ.
2 ಬಾರಿ ಉಪಮುಖ್ಯಮಂತ್ರಿಯಾಗಿದ್ದೆ, 2 ಬಾರಿ ವಿಪಕ್ಷ ನಾಯಕ ನಾಗಿದ್ದೆ. 15 ಬಾರಿ ಬಜೆಟ್ ಮಂಡಿಸಿದ್ದೇನೆ. ನನಗಾಗಲಿ, ನನ್ನ ಕುಟುಂಬಕ್ಕಾಗಲಿ ಆಸ್ತಿ ಮೇಲೆ ವ್ಯಾಮೋಹವಿಲ್ಲ. ವಾಮಮಾರ್ಗದಲ್ಲಿ ಮಾಡೋದಾಗಿದ್ದರೆ ಅಧಿಕಾರ ಇತ್ತು, ಎಷ್ಟು ಬೇಕಾದ್ರೂ ಆಸ್ತಿ ಮಾಡಬಹುದಿತ್ತು. ಆದ್ರೆ ನನಗೆ ಆಸ್ತಿ ಮೇಲೆ ವ್ಯಾಮೋಹ ಇಲ್ಲ ಎಂದು ಹೇಳಿದ್ದಾರೆ.

Share This Article