No menu items!
8.4 C
Munich
Wednesday, April 15, 2026

ನೋಡ ನೋಡ್ತಿದ್ದಂಗೆ ಹೊತ್ತಿ ಉರಿದ ಲಕ್ಷಾಂತರ ಮೌಲ್ಯದ ಕಾರು

Must read

ಬೆಂಗಳೂರು: ನೋಡ ನೋಡ್ತಿದ್ದಂಗೆ ಲಕ್ಷಾಂತರ ಮೌಲ್ಯದ ಕಾರು ಹೊತ್ತಿ ಉರಿದಿದೆ. ಆಕಸ್ಮಿಕ ಅಗ್ನಿ ಅವಘಡದಿಂದ ಲಕ್ಷಾಂತರ ಬೆಲೆಬಾಳುವ ಕಾರು ಸುಟ್ಟು ಭಸ್ಮವಾಗಿದೆ. ನಗರದ ಕಾಡುಬಿಸನಹಳ್ಳಿಯಲ್ಲಿ ಘಟನೆ ಜರುಗಿದೆ. ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಕಾರಿನ ಬ್ಯಾನೆಟ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ನೋಡ ನೋಡ್ತಿದ್ದಂಗೆ ಕಾರು ಸಂಪೂರ್ಣ ಬೆಂಕಿಗೆ ಆಹುತಿ ಆಗಿದೆ.
ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ದು, ಕಾರು ಸುಟ್ಟು ಕರಕಲಾಗಿದೆ. ಅಗ್ನಿ ಅವಘಡದಿಂದ ಕಾರಿನಲ್ಲಿದ ದಾಖಲೆಗಳು ನಾಶವಾಗಿದೆ. ಸಂಪತ್ ಕುಮಾರ್ ಗೆ ಸೇರಿದ KA-01 NA-3474 ಗ್ರಾಂಡ್ ವಿಟರಾ ಮಾಡೆಲಿನ ಹೊಸ ಕಾರು ಇದಾಗಿದ್ದು,ಕಾರು ಖರೀದಿ ಮಾಡಿ ಕೆಲ ತಿಂಗಳಾಗಿತ್ತು,ಅಷ್ಟರಲ್ಲಿಯೇ ಅವಘಡ ಸಂಭವಿಸಿದೆ ಎನ್ನಲಾಗಿದೆ.

- Advertisement -spot_img

More articles

- Advertisement -spot_img

Latest article