ನಮಗಂತೂ ಯಾವುದೇ ಅನುದಾನದ ಕೊರೆತೆ ಆಗಿಲ್ಲ: ಬೇಳೂರು ಗೋಪಾಲಕೃಷ್ಣ!
ಬೆಂಗಳೂರು:- ನಮಗಂತೂ ಯಾವುದೇ ಅನುದಾನದ ಕೊರೆತೆ ಆಗಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಮಗೆ ಯಾವುದೇ ಅನುದಾನದ ಕೊರೆತೆ ಆಗಿಲ್ಲ. ಅವರು ಯಾರೋ ತಲೆ ಕೆಟ್ಟಿರಬೇಕು ಹೇಳಿಕೆ ಕೊಟ್ಟವರಿಗೆ. ರಾಜು ಕಾಗೆ ಇರಬಹುದು ಯಾರೇ ಇರಬಹುದು ಅವರ ಹೇಳಿಕೆ ನಾನು ಒಪ್ಪಲ್ಲ ಎಂದರು.
ಈ ವೇಳೆ, ಬೇರೆ ಶಾಸಕರು ಯಾಕೆ ಹಾಗೇ ಹೇಳಿದ್ದಾರೋ ಗೊತ್ತಿಲ್ಲ. ನಮಗೆ ಅನುದಾನದ ಕೊರತೆ ಆಗಿಲ್ಲ. ಮೊದಲ ವರ್ಷ ಸ್ವಲ್ಪ ಸಮಸ್ಯೆ ಇತ್ತು. ಈಗ ಶಾಸಕರಿಗೆ ಏನು ಸಮಸ್ಯೆ ಇಲ್ಲ ಎಂದಿದ್ದಾರೆ.
ಯಾವ ಸಚಿವರು ಇದುವರೆಗೂ ನಮ್ಮ ಹತ್ತಿರ ಹಣ ಕೇಳಿಲ್ಲ. ಬೇರೆ ಶಾಸಕರಿಗೆ ಏನೋ ಗೊತ್ತಿಲ್ಲ. ಕೆಲವರಿಗೆ ಇರಬಹುದು, ಸಚಿವರುಗಳು ಯಾರು ಕೇಳಲ್ಲ ಅವರ ಕೆಳಗೆ ಇರೋರು ಕಿಡಿಗೇಡಿಗಳು ಯಾರಾದ್ರೂ ಮಾಡಿರಬಹುದು. ಸ್ವಪಕ್ಷಿಯ ಶಾಸಕರು ಆರೋಪ ಮಾಡಿದ್ದರಿಂದ ಜಮೀರ್ ಅವರು ರಾಜೀನಾಮೆ ಕೊಡಿ ಅಂದಿದ್ದೆ. ಒಳ್ಳೆಯ ಉದ್ದೇಶದಿಂದಲೇ ನಾನು ಹೇಳಿದ್ದೆ ಎಂದಿದ್ದಾರೆ.