ನಮ್ಮ ಸರ್ಕಾರ ಇದ್ದಾಗ ಕೈಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕ ಟಾಪ್ 3ನೇ ಸ್ಥಾನದಲ್ಲಿ ಇತ್ತು: ಮುರುಗೇಶ್ ನಿರಾಣಿ
ಬೆಂಗಳೂರು: ನಮ್ಮ ಸರ್ಕಾರ ಇದ್ದಾಗ ಕೈಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕ ಟಾಪ್ 3ನೇ ಸ್ಥಾನದಲ್ಲಿ ಇತ್ತು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಗತ್ತಿನ ದೊಡ್ಡ ದೊಡ್ಡ ಕೈಗಾರಿಕೆಗಳು ಅಲ್ಲಿಗೆ ಬಂದಿರುತ್ತವೆ.
ಜಗತ್ತಿನಲ್ಲಿ ಯಾವುದೇ ಸಮ್ಮೇಳನ ನಡೆದರೂ ಹೋಗಿ ಕರ್ನಾಟಕದ ಬಗ್ಗೆ ಅಲ್ಲಿ ಮಾಹಿತಿ ಕೊಡಬೇಕು. ನಮ್ಮ ಸರ್ಕಾರ ಇದ್ದಾಗ ಕೈಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕ ಟಾಪ್ 3ನೇ ಸ್ಥಾನದಲ್ಲಿ ಇತ್ತು. ಇವತ್ತು ರಾಜ್ಯ ಡಬಲ್ ಡಿಜಿಟ್‌ಗೆ ತಲುಪಿದೆ. ಇದಕ್ಕೆ ಕಾಂಗ್ರೆಸ್ ಕಾರಣ. ಸಚಿವರು ಕಾರಣ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಎಂ.ಬಿ ಪಾಟೀಲ್ ಅವರು ದಾವೋಸ್ ಸಮ್ಮೇಳನಕ್ಕೆ ಹೋಗಬೇಕು. ಅವರು ಹೋಗದೇ ಇರೋದು ಸರಿಯಲ್ಲ. ಇದರಿಂದ ನಮ್ಮ ರಾಜ್ಯಕ್ಕೆ ನಷ್ಟ ಆಗುತ್ತದೆ. ಕೈಗಾರಿಕೆ ಬಾರದೇ ಹೋದರೆ ಉದ್ಯೋಗ ಸೃಷ್ಟಿ ಆಗೋದಿಲ್ಲ. ಇದರಿಂದ ರಾಜ್ಯಕ್ಕೆ ಬಹಳ ನಷ್ಟ ಆಗಲಿದೆ ಎಂದು ಬೇಸರ ವ್ಯಕ್ತಪಪಡಿಸಿದ್ದಾರೆ.