ನಮ್ಮ ಸರ್ಕಾರ ಯಾವುದೇ ಮಾಫಿಯಾದಲ್ಲಿ ಸಿಲುಕಿಕೊಂಡಿಲ್ಲ: ದಿನೇಶ್ ಗುಂಡೂರಾವ್
ಬೆಳಗಾವಿ: ನಮ್ಮ ಸರ್ಕಾರ ಯಾವುದೇ ಮಾಫಿಯಾದಲ್ಲಿ ಸಿಲುಕಿಕೊಂಡಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಳಗಾವಿ ಅಧಿವೇಶನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಾಣಂತಿಯರ ಮರಣಗಳಾಗುತ್ತವೆ. ಅವು ವೈದ್ಯಕೀಯ ಕಾರಣದಿಂದ ಅಂತ ಹೇಳಲು ಆಗುವುದಿಲ್ಲ.
ವಿರೋಧ ಪಕ್ಷಗಳು ನಿಜವಾದ ಲೋಪದೋಷಗಳ ಬಗ್ಗೆ ಮಾತನಾಡಲಿ. ದೇಶದ ಆರೋಗ್ಯ ಸೇವೆಗಳಲ್ಲಿ ಕರ್ನಾಟಕ ಉತ್ತಮ ಸ್ಥಾನದಲ್ಲಿದೆ. ಬಾಣಂತಿಯರ ಮರಣ ವೈದ್ಯಕೀಯ ಕಾರಣಗಳಿಂದ ಆಗಿರಬಹುದು. ನಮ್ಮ ಸರ್ಕಾರ ಯಾವುದೇ ಮಾಫಿಯಾದಲ್ಲಿ ಸಿಲುಕಿಕೊಂಡಿಲ್ಲ. ಕೋವಿಡ್ ಹಗರಣದ ಕುರಿತು ಮೊದಲು ಉತ್ತರ ನೀಡಲಿ ಎಂದರು.
ಇನ್ನೂ ಗರ್ಭಿಣಿಯರು ಬಳ್ಳಾರಿ ಆಸ್ಪತ್ರೆಗೆ ಮತ್ತೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲೂ ವೈದ್ಯರ ಕೊರತೆಯಿದೆ. ನಾವು ವೈದ್ಯಕೀಯ ನೇಮಕಾತಿಯಲ್ಲಿ ಯಾವುದೇ ರಾಜಕೀಯಕ್ಕೆ ಆಸ್ಪದ ನೀಡದೆ ಪಾರದರ್ಶಕತೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ ಎಂದರು.