ಬೆಂಗಳೂರು: ನಮ್ಮ 3 ಎಕ್ರೆ 16 ಗುಂಟೆ ಜಮೀನು ಒತ್ತುವರಿ ಮಾಡಿದ್ದಾರೆ. ಕಾನೂನು ಬಾಹಿರವಾಗಿ ಈ ಒತ್ತುವರಿ ನಡೆದಿದೆ. ನಾವು ಒತ್ತುವರಿ ಮಾಡಿದ್ದು ತಪ್ಪು ಎಂದು ಮುಡಾದವರೇ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಡಾದವರು ತಪ್ಪು ಮಾಡಿದ್ದಕ್ಕೆ ನಾನು ಯಾಕೆ ಹೊಣೆಗಾರನಾಗಬೇಕು.
ನಮಗೆ ಇಲ್ಲೇ ಜಾಗ ನೀಡಬೇಕು ಎಂದು ಕೇಳಿಲ್ಲ. ನಾವೇನೂ ವಿಜಯನಗರದ 3-4 ಹಂತದಲ್ಲಿ ಕೊಡಿ ಎಂದು ಕೇಳಿದ್ದೀವಾ? ನಮಗೆ ಜಾಗ ಹಂಚಿಕೆಯಾಗಿದ್ದು 2021ರಲ್ಲಿ. 2021ರಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು. ಅವರ ಸರ್ಕಾರ ಇರುವಾಗ ಹಂಚಿಕೆಯಾಗಿ ಈಗ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ನಮ್ಮ 3 ಎಕ್ರೆ 16 ಗುಂಟೆ ಜಮೀನು ಒತ್ತುವರಿ ಮಾಡಿದ್ದಾರೆ !
Date: