ನವರಾತ್ರಿಯ ಮೂರನೇ ದಿನದಲ್ಲಿ ಪೂಜಿಸುವ ದೇವಿ ಚಂದ್ರಘಂಟಾ. ದೇವಿ ಚಂದ್ರಘಂಟಾ ಹೇಗಿದ್ದಾಳೆ ಅನ್ನೊದನ್ನ ನೋಡೊದಾದ್ರೆ, ಆಕೆಯ ಮಸ್ತಕದಲ್ಲಿ ಅರ್ಧ ಚಂದ್ರದ ಆಕಾರದ ಘಂಟೆಯಿದ್ದು, ಅದರಿಂದ “ಚಂದ್ರಘಂಟಾ” ಎಂಬ ಹೆಸರು ಬಂದಿದೆ. ಆಕೆ ಸಿಂಹ ವಾಹನದಲ್ಲಿದ್ದು, ಶಾಂತಿ–ಸೌಖ್ಯವನ್ನು ನೀಡುವ ದೇವಿ.
ಪೂಜಾ ವಿಧಾನ
- ಬೆಳಿಗ್ಗೆ ಸ್ನಾನ ಮಾಡಿ ಶುಭ ಬಣ್ಣದ ವಸ್ತ್ರ ಧರಿಸಬೇಕು.
- ಕಲಶ ಪೂಜೆ ಮಾಡಿ, ದೇವಿಗೆ ಕುಂಕುಮ, ಹಾಲು, ಅಕ್ಕಿ, ಹೂವುಗಳಿಂದ ಆರಾಧನೆ.
- ದೀಪ ಹಚ್ಚಿ, ದೇವಿಯ ಮಂತ್ರವನ್ನು ಜಪಿಸಬೇಕು.
ಮಂತ್ರ
ಓಂ ದೇವಿ ಚಂದ್ರಘಂಟಾಯೈ ನಮಃ
ಹೂವು: ಕೆಂಪು ಬಣ್ಣದ ಹೂವು (ಹಿಬಿಸ್ಕಸ್/ಅರಳಿಮಲ್ಲಿಗೆ). ಬಣ್ಣ: ಹಳದಿ ಅಥವಾ ಕಿತ್ತಳೆ ಬಣ್ಣ.
ನೈವೇದ್ಯ: ಗೋಧಿಹಿಟ್ಟು ಹಾಲು ಪಾಯಸ, ಬೆಲ್ಲದ ಸಿಹಿ, ಅಥವಾ ಹಾಲು ಸೇರಿದ ತಿನಿಸುಗಳನ್ನು ಸಮರ್ಪಿಸುವುದು ಶುಭಕರ. ಈ ದಿನದ ಪೂಜೆಯಿಂದ ಭಯ, ಅಡೆತಡೆಗಳು ದೂರವಾಗಿ, ಮನಸ್ಸಿನಲ್ಲಿ ಶಾಂತಿ ನೆಲೆಸುತ್ತದೆ.