ನಾನು ಅವರ ಶಿಷ್ಯನಿದ್ದಂತೆ ಎಂದು ಎಂ.ಬಿ.ಪಾಟೀಲ್ ಅವರಿಗೆ ತಿರುಗೇಟು ನೀಡಿದರು. ನನ್ನ ವಿರುದ್ಧ ರಾಹುಲ್‍ಗಾಂಧಿ ಅವರಿಗೂ ದೂರು ನೀಡಲಿ, ಏನು ಬೇಕಾದರೂ ಟೀಕೆ ಮಾಡಲಿ. ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಯಾರ ವ್ಯವಹಾರದಲ್ಲೂ ಮೂಗು ತೂರಿಸುವುದಿಲ್ಲ. ಮೂಗು ಚುಚ್ಚುವ ಅಭ್ಯಾಸವೂ ನನಗಿಲ್ಲ ಎಂದರು.
ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ. ಪಕ್ಷ ಹೇಳಿದಂತೆ ನಾನು ನಡೆದುಕೊಳ್ಳುತ್ತೇನೆ. ನನ್ನ ಅಭಿಪ್ರಾಯಗಳನ್ನು ಹೇಳಲು ನನಗೆ ಸ್ವಾತಂತ್ರ್ಯವಿದೆ. ಎಂ.ಬಿ.ಪಾಟೀಲ್ ಈ ಬಗ್ಗೆ ಏಕ ವಚದಲ್ಲಾದರೂ ಮಾತನಾಡಲಿ.
ಬಹುವಚನದಲ್ಲಾದರೂ ಮಾತನಾಡಲಿ. ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ. ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಂಡು ಬರುವ ಸಾಮಥ್ರ್ಯ ನನಗಿಲ್ಲ ಎಂದು ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.