ನಾನು ಪಕ್ಷದ ಅಧ್ಯಕ್ಷನಾಗಿ ಹೇಳ್ತೇನೆ, ಜಮೀರ್ ಹೇಳಿದ್ದು ಸರಿಯಲ್ಲ: ಡಿ.ಕೆ.ಶಿವಕುಮಾರ್
ಬೆಂಗಳೂರು; ನಾನು ಪಕ್ಷದ ಅಧ್ಯಕ್ಷನಾಗಿ ಹೇಳ್ತೇನೆ, ಜಮೀರ್ ಹೇಳಿದ್ದು ಸರಿಯಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾನು ಆ ಹೇಳಿಕೆಯನ್ನ ಒಪ್ಪುವುದಿಲ್ಲ. ಅದನ್ನ ನಾನು ಖಂಡಿಸ್ತೇನೆ. ಜಮೀರ್ ಅವರು ಏನುಬೇಕಾದ್ರೂ ಕರೆದುಕೊಳ್ಳಲಿ. ಕರಿಯ ಅಂತಾದ್ರೂ ಅನ್ನಲಿ, ಕೊಚ್ಚೆ ಅಂತಾದ್ರೂ ಕರೆಯಲಿ. ನಾನು ಪಕ್ಷದ ಅಧ್ಯಕ್ಷನಾಗಿ ಹೇಳ್ತೇನೆ. ನಾನು ಆನ್ ರೆಕಾರ್ಡ್ ಹೇಳ್ತೇನೆ ಜಮೀರ್ ಹೇಳಿದ್ದು ಸರಿಯಲ್ಲ. ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ ಎಂದು ತಿಳಿಸಿದರು. ಜಮೀರ್ ವಿರುದ್ಧ ಕ್ರಮ ತೆಗೆದುಕೊಳ್ತೀರ ಎಂಬ ಪ್ರಶ್ನೆಗೆ, ಅದನ್ನ ಆಮೇಲೆ ನೋಡೋಣ ಎಂದರು.
ಇನ್ನೂ ಜಮೀರ್ ವಿರುದ್ಧ ಶಿಸ್ತು ಕ್ರಮ ವಿಚಾರವಾಗಿ ಮಾತನಾಡಿ, ಜಮೀರ್ ಅವರದ್ದು ಪರ್ಸನಲ್ ವಿಚಾರ. ಅವರು ಮಾತನಾಡಬಾರದಿತ್ತು. ಕಪ್ಪು ಬಿಳುಪು ಅದೆಲ್ಲಾ ಬೇಡ. ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಪ್ರೀತಿಯಿಂದ ಮಾತಾಡಿದ್ರೋ ಸಲುಗೆಯಿಂದ ಮಾತನಾಡಿದ್ದಾರೋ ತಪ್ಪು ತಪ್ಪೇ. ಜಮೀರ್ ಅವರಿಗೆ ಆಂತರಿಕವಾಗಿ ಹೇಳಿದ್ದೇವೆ. ಅವರು ಕ್ಷಮೆ ಕೂಡ ಕೇಳಿದ್ದಾರೆ. ನಾವು ಆ ಹಂತ ಹೋಗಬಾರದು ಅಷ್ಟೇ. ಅವರಿಬ್ಬರು ಏನು ಅಂತ ಗೊತ್ತಿಲ್ಲ. ಅದು ಜನ ತೀರ್ಮಾನ ಮಾಡಲಿ. ನಾನು ಹೇಳಿದ್ದು, ಜಮೀರ್ ಹೇಳಿದ್ದು ರಾಂಗ್. ನಾವು ಅವರನ್ನ ತಿದ್ದುತ್ತೇವೆ ಎಂದರು.