ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ನಡುವೆ ಮನಸ್ತಾಪವಿದೆ. ಇಬ್ಬರ ನಡುವೆ ಕೋಲ್ಡ್ ವಾರ್ ನಡೀತಾ ಇದೆ ಎಂಬ ಮಾತುಗಳು ಇವೆ. ಇತ್ತೀಚೆಗೆ ವಿರಾಟ್ ಕೊಹ್ಲಿಹಗಿಂತಾ ರೋಹಿತ್ ಶರ್ಮಾ ಅಬ್ಬರ ಜೋರಾಗಿದೆ. ವಿಶ್ವಕಪ್ನಲ್ಲಂತೂ ರೋಹಿತ್ ಶರ್ಮಾ ಅದ್ಭುತ ಆಟ ಪ್ರದರ್ಶಿಸಿದ್ದರು. ಸೀರಿಸ್ನಲ್ಲಿ ಅತೀ ಹೆಚ್ಚು ರನ್ ಮಾಡಿದ ದಾಖಲೆ ಸೇರಿದಂತೆ ಅನೇಕ ದಾಖಲೆಗಳನ್ನು ರೋಹಿತ್ ತನ್ನದಾಗಿಸಿಕೊಂಡಿದ್ದರು.
ಪ್ರಸ್ತುತ ಭಾರತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ. ಟೆಸ್ಟ್, ಏಕದಿನ, ಟಿ20 ಸರಣಿಯನ್ನು ಆಡಲಿದೆ. ಈಗಾಗಲೇ 3 ಪಂದ್ಯಗಳ ಟಿ20 ಸರಣಿಯಲ್ಲಿ 2 ಪಂದ್ಯಗಳನ್ನು ಭಾರತ ಗೆದ್ದಿದೆ. ಈ ಸರಣಿಯಲ್ಲೂ ವಿರಾಟ್ಗಿಂತಾ ರೋಹಿತ್ ಶರ್ಮಾ ಬ್ಯಾಟೇ ಜೋರಾಗಿ ಸದ್ದು ಮಾಡುತ್ತಿದೆ. ನಿನ್ನೆ ನಡೆದ ಮ್ಯಾಚ್ನಲ್ಲಿ ರೋಹಿತ್ ಶರ್ಮಾ 67 ರನ್ ಮಾಡಿದ್ರು. ಟಿ20ಯಲ್ಲಿ ಅವರು ಮಾಡಿದ 17ನೇ ಅರ್ಧಶತಕವಾಗಿದೆ. ಇದರೊಂದಿಗೆ 50+ ಗಳಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ. ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ರೋಹಿತ್ ನಂಬರ್ 1 ಪಟ್ಟ ಅಲಂಕರಿಸಿದ್ದಾರೆ.
ವಿರಾಟ್ ಕೊಹ್ಲಿ 20 ಅರ್ಧಶತಕಗಳನ್ನು ಮಾತ್ರ ಮಾಡಿದ್ದು, ರೋಹಿತ್ ಶರ್ಮಾ 17 ಅರ್ಧಶತಕ ಹಾಗೂ 4 ಶತಕದೊಂದಿಗೆ 21 ಬಾರಿ 50+ ರನ್ಗಳನ್ನು ಮಾಡಿದಂತಾಗಿದೆ. ಹೀಗೆ ವಿರಾಟ್ ಕೊಹ್ಲಿಗೆ ರೋಹಿತ್ ಸೆಡ್ಡು ಹೊಡೆದಿದ್ದಾರೆ.
ಅದಲ್ಲದೆ ನಿನ್ನೆ ನಡೆದ ಮ್ಯಾಚ್ನಲ್ಲಿ ಹಿಟ್ ಮ್ಯಾನ್ 3 ಸಿಕ್ಸರ್ಗಳನ್ನು ಸಿಡಿಸಿದ್ರು. ಈ ಮೂರು ಸಿಕ್ಸರ್ಗಳೊಂದಿಗೆ ಟಿ20ಯಲ್ಲಿ 107 ಸಿಕ್ಸರ್ ದಾಖಲಿಸಿದರು. ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ (105), ನ್ಯೂಜಿಲೆಂಡ್ನ ಮಾರ್ಟಿನ್ ಗಪ್ಟಿಲ್ (103) ಅವರನ್ನು ಹಿಂದಿಕ್ಕಿ ರೋಹಿತ್ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದರು. ಹೀಗೆ ಎರಡೆರಡು ದಾಖಲೆಗಳನ್ನು ಮಾಡಿದ್ದಾರೆ.
ನಾಯಕ ವಿರಾಟ್ಗೆ ಸೆಡ್ಡು ಹೊಡೆದೇ ಬಿಟ್ರು ರೋಹಿತ್ ಶರ್ಮಾ..!
Date: