ನಾವು ಭಾರತೀಯರು ಅಂತ ಹೇಳಿಕೊಳ್ಳೋಕೆ ಹೆಮ್ಮೆ ಪಡ್ಬೇಕು ..! ಯಾಕಂದ್ರೆ?

Date:

ನಾವು ಭಾರತೀಯರು.. ಹೆಮ್ಮೆಯಿಂದ ಹೇಳಿಕೊಳ್ಳಿ ಏಕೆಂದರೆ..?

ಭಾರತ. ಅನಾದಿ ಕಾಲದಿಂದಲೂ ವಿಶ್ವದ ಗಮನ ಸೆಳೆಯುತ್ತಾ ಬಂದಿರುವ ಅದ್ಭುತ ದೇಶ. ಇಲ್ಲಿ ಎಲ್ಲವೂ ಇದೆ. ಜಾತಿ ಬೇಧ ಮಾಡದೇ ಬದುಕುತ್ತಿರುವ ಜನರು ಇಲ್ಲಿದ್ದಾರೆ. ವಿಶ್ವವನ್ನೇ ದಂಗುಬಡಿಸುವಷ್ಟು ಸಾಮಥ್ರ್ಯ ಹೊಂದಿರುವ ಜನರಿದ್ದಾರೆ. ಆದ್ದರಿಂದ ನಾವು ಭಾರತೀಯರೆನ್ನಲು ಹೆಮ್ಮೆ ಎನಿಸುತ್ತದೆ. ಅಲ್ಲದೇ ಇನ್ನೂ ಹತ್ತು ಹಲವು ಕಾರಣಗಳಿಂದ ಭಾರತ ಜಗದ ಗಮನವನ್ನು ಸೆಳೆದಿದೆ, ಸೆಳೆಯುತ್ತಿದೆ.

1. 1896ರವರೆಗೆ ಭಾರತದಲ್ಲಿ ಮಾತ್ರವೇ ವಜ್ರಗಳು ದೊರೆಯುತ್ತಿದ್ದವು. ಅವುಗಳನ್ನು ಬೀದಿ ಬೀದಿಗಳಲ್ಲಿ ಅದೂ ಕೂಡಾ ಸೇರುಗಳಲ್ಲಿ ಅಳೆದು ಮಾರುತ್ತಿದ್ದ ಶ್ರೀಮಂತ ದೇಶ ನಮ್ಮದು.

2. ವಿಶ್ವದಲ್ಲೇ 2 ಅತಿ ಹೆಚ್ಚು ಪ್ರಮಾಣದ ವಿಜ್ಞಾನಿಗಳು ಹಾಗೂ ಇಂಜಿನಿಯರುಗಳು ಇರುವ ದೇಶ ನಮ್ಮದು. ವಿದೇಶದ ಪ್ರಮುಖ ಕಂಪನಿಗಳಲ್ಲಿ ಭಾರತೀಯರೇ ಪ್ರಾಬಲ್ಯ ಮೆರೆಯುತ್ತಿದ್ದಾರೆ.

3. ಜಪಾನ್ ಮತ್ತು ಅಮೆರಿಕಾ ಬಿಟ್ಟರೆ ಭಾರತವೇ ಮೊದಲ ಬಾರಿಗೆ ಸೂಪರ್ ಕಂಪ್ಯೂಟರನ್ನು ನಿರ್ಮಿಸಿತ್ತು. 1991ರಲ್ಲೇ ಪರಮ್ 8000 ಎಂಬ ಸೂಪರ್ ಕಂಪ್ಯೂಟರ್ ಭಾರತದಲ್ಲಿ ನಿರ್ಮಾಣವಾಗಿತ್ತು.

4. ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ. ನಮ್ಮ ದೇಶದಲ್ಲಿ ಪ್ರತಿ ಚುನಾವಣೆಯಲ್ಲಿ ಸುಮಾರು 1.2 ಮಿಲಿಯನ್ಗಿಂತಲೂ ಹೆಚ್ಚಿನ ಜನರು ಮತದಾನ ಮಾಡುತ್ತಾರೆ.

5. ಭಾರತಕ್ಕೆ ಇಂಗ್ಲೀಷರು ನೀಡಿದ ಒಂದು ಕೊಡುಗೆ ಎಂದರೆ ಅದು ಇಂಗ್ಲೀಷ್. ನಂಬಿದ್ರೆ ನಂಬಿ ಬಿಟ್ರೆ ಬಿಡಿ ವಿಶ್ವದಲ್ಲಿ ಅತಿ ಹೆಚ್ಚು ಇಂಗ್ಲೀಷ್ ಮಾತನಾಡುವ ದೇಶಗಳ ಪಟ್ಟಿನ ಭಾರತಕ್ಕೆ ಎರಡನೇ ಸ್ಥಾನ.

6. ಭಾರತದ ಮಾಜಿ ರಾಷ್ಟ್ರಪತಿ ದಿ. ಎಪಿಜೆ ಅಬ್ದುಲ್ ಕಲಾಂ ಅವರು ಒಮ್ಮೆ ಸ್ವಿಟ್ಜಲರ್ೆಂಡ್ಗೆ ಭೇಟಿ ನೀಡಿದ್ದರು. ಅಂದು ಮೇ 26. ಅದೇ ದಿನವನ್ನು ಸ್ವಿಟ್ಜರ್ ಲ್ಯಾಂಡ್ ವಿಜ್ಞಾನ ದಿನವನ್ನಾಗಿ ಘೋಷಿಸಿದೆ..!

7. ಇಲ್ಲಿಯವರೆಗೆ 4 ಬಾರಿ ಕಬಡ್ಡಿ ವಿಶ್ವಕಪ್ ನಡೆದಿದೆ. ಆ ಎಲ್ಲಾ ವಿಶ್ವಕಪ್ ಗಳಲ್ಲೂ ಭಾರತವೇ ಜಯಭೇರಿ ಬಾರಿಸಿದೆ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿ ಎನಿಸಿದ ಪಾಕಿಸ್ತಾನಕ್ಕೆ ಎರಡು ಬಾರಿ ಫೈನಲ್ನಲ್ಲಿ ಮಣ್ಣು ಮುಕ್ಕಿಸಿದೆ.

8. ಸೊನ್ನೆಯನ್ನು ವಿಶ್ವಕ್ಕೆ ಪರಿಚಯಿಸಿದ್ದು ಭಾರತ. ಸೊನ್ನೆ ಇಲ್ಲದಿದ್ದರೆ 9ಕ್ಕೇ ಅಂಕಿಗಳು ಕೊನೆಯಾಗುತ್ತಿದ್ದವೇನೋ..? ಅಲ್ಲದೇ ಬೀಜಗಣಿತ, ತ್ರಿಕೋನ ಮಿತಿ, ಕ್ಯಾಲ್ಕಲಸ್ಗಳನ್ನು ವಿಶ್ವಕ್ಕೆ ಪರಿಚಯಿಸಿದ್ದು ಭಾರತ.

9. 90 ದೇಶಗಳಿಗೆ ವಿವಿಧ ಸಾಫ್ಟ್ ವೇರ್ ಗಳನ್ನು ಭಾರತವೇ ರವಾನಿಸುತ್ತದೆ..!

10. ವಿಶ್ವದಲ್ಲೇ ಅತ್ಯಂತ ಹೆಚ್ಚು ಪ್ರಮಾಣದ ಜನರಿಗೆ ಉದ್ಯೋಗಾವಕಾಶ ನೀಡಿರುವುದು ಭಾರತೀಯ ರೈಲು ಇಲಾಖೆ. ಇಲ್ಲಿ ಏನಿಲ್ಲವೆಂದರೂ ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನರಿಗೆ ಉದ್ಯೋಗ ದೊರೆತಿದೆ.

11. ವಿಶ್ವದಲ್ಲೇ ಅತಿ ಹೆಚ್ಚಿನ ಪೋಸ್ಟ್ ಆಫೀಸ್ ಗಳು ಇರುವುದು ಭಾರತದಲ್ಲಿ.

12. ವಿಶ್ವಕ್ಕೆ ಚೆಸ್, ಕರಾಟೆ, ಕುಂಗ್ ಫೂ ಕಲಿಸಿಕೊಟ್ಟಿದ್ದು ಭಾರತ.

13. ಭಾರತ ಒಂದು ಲಕ್ಷ ವರ್ಷಗಳಿಂದ ಯಾವುದೇ ದೇಶಗಳ ಮೇಲೆ ದಾಳಿಯನ್ನೇ ಮಾಡಿಲ್ಲ. ಆದರೆ ನಮ್ಮ ಮೇಲೆ ದಾಳಿ ಮಾಡಿ ಬಂದವರಿಗೆ ಬಿಟ್ಟಿಲ್ಲ.

ವಿಶ್ವದ ಹತ್ತು ಅದ್ಭುತ ರೈಲ್ವೇ ಸ್ಟೇಷನ್ ಗಳಿವು ಟಾಪ್ 5 ಲಿಸ್ಟ್ ನಲ್ಲಿದೆ ಭಾರತದ ರೈಲ್ವೇ ಸ್ಟೇಷನ್..?!

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...