ನಿಂತಿದ್ದ ಕಾರಿನ ಮೇಲೆ ಬಿದ್ದ ಮರ: ತಪ್ಪಿದ ಅನಾಹುತ!
ಧಾರವಾಡ: ಧಾರವಾಡದ ಕೋರ್ಟ್ ಸರ್ಕಲ್ ಬಳಿ ನಿಂತಿದ್ದ ಕಾರಿನ ಮೇಲೆ ಮರದ ಕೊಂಬೆಯೊಂದು ಬಿದ್ದು ಘಟನೆ ಸಂಭವಿಸಿದೆ.
ಕೋರ್ಟ್ ವೃತ್ತದ ಬಳಿಯ ಮರದ ಕೆಳಗೆ ವಾಹನದ ಮಾಲೀಕ ತನ್ನ ಕಾರು ನಿಲ್ಲಿಸಿ ಹೋಗಿದ್ದ. ಈ ವೇಳೆ ಮರದ ಬೃಹತ್ ಕೊಂಬೆ ಮುರಿದ ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇಲ್ಲದೇ ಹೋಗಿದ್ದರಿಂದ ಅನಾಹುತ ತಪ್ಪಿದಂತಾಗಿದೆ.
ಕೊಂಬೆ ಬಿದ್ದಿದ್ದರಿಂದ ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಭಾರೀ ಅನಾಹುತ ಸಣ್ಣ ಪ್ರಮಾಣದಲ್ಲಿ ಜರುಗಿದೆ