ಕೈ ಕಾರ್ಯಕರ್ತರೆಲ್ಲಾ ಅಂಬಿ ಅಭಿಮಾನಿಗಳ ಪರವಾಗಿದ್ದಾರೆ, ಹೀಗಾಗಿ ನಿಖಿಲ್ ಪರ ಮತ ಯಾಚಿಸಲು ಸಾಧ್ಯವಿಲ್ಲ ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹೇಳಿದ್ದಾರೆ
ಪ್ರಸನ್ನ ಅವರು ಮಾಜಿ ಸಚಿವ ಎನ್ ಚಲುವರಾಯ ಸ್ವಾಮಿ ಅವರ ಆಪ್ತರಾಗಿದ್ದಾರೆ, ಮಂಡ್ಯ ಕ್ಷೇತ್ರದಿಂದ ಸುಮಲತಾ ಅವರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ, ಒಂದು ವೇಳೆ ನಾವು ಜೆಡಿಎಸ್ ಪರ ಮಾತಯಾಚಿಸಲು ಹೋದ್ರೆ ಜನ ನಮಗೆ ಹೊಡೆಯಲು ಬರುತ್ತಾರೆ ಎಂದರು.
ಹೊರಗಿನಿಂದ ಬಂದವರ ಪರ ಮತಯಾಚಿಸಬಾರದು ಎಂದು ನಮ್ಮನ್ನು ಹೆದರಿಸುತ್ತಾರೆ. ಹೈಕಮಾಂಡ್ ಎಚ್ಚರಿಕೆ ನೀಡಿದ್ದರೂ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುತ್ತಿಲ್ಲ, ಹೀಗಾಗಿ ಸ್ಥಳೀಯರನ್ನು ವಿರೋಧಿಸಿ ನಾವು ಮತಯಾಚನೆ ಮಾಡಲು ಸಾಧ್ಯವಿಲ್ಲ, ಕುಮಾರ ಸ್ವಾಮಿ ಅವರಿಗೆ ಅಂಬರೀಷ್ ಅವರ ಮೇಲೆ ಅಪಾರ ಪ್ರೀತಿ ಗೌರವವಿದೆ, ಹೀಗಾಗಿ ಸುಮಲತಾ ಅವರಿಗೆ ಟಿಕೆಟ್ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಇಗಾಗಲೆ ಮಂಡ್ಯದಲ್ಲಿ ನಿಖಿಲ್ ಹಾಗು ಸುಮಲತಾ ಅವರ ಹಣಾಹಣಿ ಜೊರಗಿದೆ. ಮತದಾರ ಯಾರಕಡೆ ಒಲಿಯುತ್ತಾನೆಂಬುದು ಕಾದುನೋಡಬೇಕಿದೆ.