ಲೋಕಸಭಾ ಚುಮಾವಣಾ ಕಣ ರಂಗೇರುತ್ತಿದೆ. ಎಲೆಕ್ಷನ್ ಡೇಟ್ ಅನೌನ್ಸ್ ಆಗಿದೆ. ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಗೆ ಎಲ್ಲಾ ಪಕ್ಷಗಳು ಸಿದ್ಧವಾಗುತ್ತಿವೆ. ಕೆಲವೊಂದು ಗೊಂದಲಗಳಿಂದ ಅಭ್ಯರ್ಥಿಯಗಳ ಕಂಪ್ಲೀಟ್ ಪಟ್ಟಿ ಬಿಡುಗಡೆಯಾಗಿಲ್ಲ.ಆದರೆ, ಕೆಲವೊಬ್ಬರ ಸ್ಪರ್ಧೆ ಮಾತ್ರ ಕನ್ಫರ್ಮ್ ಆಗಿದೆ.
ಎಲೆಕ್ಷನ್ ಎಫೆಕ್ಟ್ ಸಿನಿಮಾಗಳ ಮೇಲೂ ಆಗುತ್ತಿದೆ. ಚಿತ್ರಗಳಿಗೆ ಎಲೆಕ್ಷನ್ ಬಿಸಿನಾ? ಹೌದು , ಕೆಲವೊಂದಿಷ್ಟು ಸಿನಿಮಾಗಳಿಗೆ ಚುನಾವಣೆ ಬಿಸಿ ತಟ್ಟುತ್ತಿದೆ.
ಮುಖ್ಯವಾಗಿ ಸುಮಲತಾ ಅಂಬರೀಶ್, ನಿಖಿಲ್ ಕುಮಾರ ಸ್ವಾಮಿ ಮತ್ತು ಉಪೇಂದ್ರ ಅವರ ಚಿತ್ರಗಳು ಇನ್ನು ರಿಲೀಸ್ ಆಗೋದು ಬಹುಶಃ ಎಲೆಕ್ಷನ್ ಮುಗಿದ ಮೇಲೆ.
ನಿಮಗೆ ಗೊತ್ತೇ ಇರುವಂತೆ ಸುಮಲತಾ ಅಂಬರೀಶ್ ಮಂಡ್ಯದಿಂದ ಚುನಾವಣೆ ಸ್ಪರ್ಧಿಸುತ್ತಿದ್ದಾರೆ. ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮೈತ್ರಿ ಕ್ಯಾಂಡಿಡೇಟ್ ಆಗಿ ಕಣಕ್ಕಿಳಿಯುವುದು ಕನ್ಫರ್ಮ್. ಉಪೇಂದ್ರ ಅವರ ಯುಪಿಪಿ ಅಂದರೆ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಬಹುತೇಕ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಕಣಕ್ಕಿಳಿಯುತ್ತಿದ್ದಾರೆ. ಉಪೇಂದ್ರ ಅವರೇ ಆ ಪಕ್ಷದ ಅಧ್ಯಕ್ಷರು. ಹೀಗಾಗಿ ಇವರುಗಳ ಸಿನಿಮಾಗಳ ರಿಲೀಸ್ ಗೆ ನೀತಿ ಸಂಹಿತೆ ಅಡ್ಡಿ ಬರುತ್ತದೆ. ಹಾಗಾಗಿ ಏಪ್ರಿಲ್ ನಲ್ಲಿ ರಿಲೀಸ್ ಆಗುತ್ತವೆ ಎನ್ನಲಾಗಿದ್ದ ನಿಖಿಲ್ ಅಭಿನಯದ ‘ಕುರುಕ್ಷೇತ್ರ’ , ಸುಮಲತಾ ಅವರ ‘ಡಾಟರ್ ಆಫ್ ಪಾರ್ವತಮ್ಮ’ ಮತ್ತು ಉಪೇಂದ್ರ ಅವರ ‘ಐ ಲವ್ ಯು’ ಸಿನಿಮಾಗಳು ಸದ್ಯ ಬಿಡುಗಡೆ ಆಗಲ್ಲ. ಇನ್ನು ಚುನಾವಣೆ ಬಳಿಕವೇ ಸರಿ.
ಅದೇರೀತಿ ಪ್ರಕಾಶ್ ರೈ ಅಭಿನಯದ ತೆಲುಗು , ತಮಿಳು ಸಿನಿಮಾಗಳ ರಿಲೀಸ್ ಗೂ ನೀತಿಸಂಹಿತೆ ಬಿಸಿ ತಟ್ಟಿದೆ.
ನಿಖಿಲ್, ಸುಮಲತಾ, ಉಪೇಂದ್ರ ಸಿನಿಮಾಗಳಿಗೆ ಎಲೆಕ್ಷನ್ ಬಿಸಿ…!
Date: