ನಿತ್ಯ ನೀವು ರಸ್ಕ್‌ ತಿಂದು ಮಕ್ಕಳಿಗೂ ರಸ್ಕ್‌ ತಿನ್ನಿಸುತ್ತೀರಾ? ಈ ಸಮಸ್ಯೆ ಗ್ಯಾರಂಟಿ!

Date:

ನಿತ್ಯ ನೀವು ರಸ್ಕ್‌ ತಿಂದು ಮಕ್ಕಳಿಗೂ ರಸ್ಕ್‌ ತಿನ್ನಿಸುತ್ತೀರಾ? ಈ ಸಮಸ್ಯೆ ಗ್ಯಾರಂಟಿ!

ನಮ್ಮಲ್ಲಿ ಹೆಚ್ಚಿನವರಿಗೆ ಚಹಾದ ಜೊತೆ ರಸ್ಕ್ ತಿನ್ನುವ ಅಭ್ಯಾಸವಿದೆ. ಚಹಾದ ಜೊತೆ ತಿನ್ನಲು ಏನೂ ಇಲ್ವಾ, ಹಾಗಾದ್ರೆ ರಸ್ಕ್‌ ಅಂತೂ ಮನೆಯಲ್ಲಿ ಇದ್ದೇ ಇರುತ್ತದೆ. ಮಕ್ಕಳಿಗೂ ಇದನ್ನೇ ನೀಡುತ್ತಾರೆ. ರಸ್ಕ್‌ ತಿನ್ನಲು ರುಚಿಕರವಾಗಿರುತ್ತದೆ, ಆದರೆ ಅದು ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ ಅನ್ನೋದನ್ನು ಯಾರೂ ತಿಳಿಯುವುದಿಲ್ಲ. ನಿಮಗೆ ಗೊತ್ತಾ ರಸ್ಕ್‌ ಅಥವಾ ಟೋಸ್ಕ್‌ನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು.

ರಸ್ಕ್‌ ಆರೋಗ್ಯಕ್ಕೆ ಹಾನಿಕಾರಕವಾದ ವಿವಿಧ ವಸ್ತುಗಳನ್ನು ಒಳಗೊಂಡಿರುತ್ತವೆ. ಸರಳವಾಗಿ ಹೇಳುವುದಾದರೆ ನಿಧಾನವಾಗಿ ದೇಹವನ್ನು ಪ್ರವೇಶಿಸುವ ವಿಷದಂತೆ ರಸ್ಕ್​. ಹೀಗಾಗಿ ಅದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ರಸ್ಕ್ ಅನ್ನು ಹಿಟ್ಟು, ಸಕ್ಕರೆ ಮತ್ತು ಅಗ್ಗದ ಎಣ್ಣೆಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟ್ರಾನ್ಸ್ ಫ್ಯಾಟ್ ಮತ್ತು ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ. ಹೃದಯದ ಆರೋಗ್ಯ ಮತ್ತು ದೇಹದ ತೂಕಕ್ಕೆ ಅಪಾಯಕಾರಿ.

ಅಂಗಡಿಗಳಲ್ಲಿ ದೊರೆಯುವ ರಸ್ಕ್ ಗಳನ್ನು ಹೆಚ್ಚಾಗಿ ಹಳಸಿದ ಬ್ರೆಡ್​ನಿಂದ ತಯಾರಿಸಲಾಗುತ್ತದೆ. ಇದು ದೇಹದ ಆರೋಗ್ಯಕ್ಕೂ ಒಳ್ಳೆಯದಲ್ಲ. ರಸ್ಕ್ ತಯಾರಿಕೆಯಲ್ಲಿ ಬಳಸುವ ಎಣ್ಣೆ ಕಳಪೆ ಗುಣಮಟ್ಟ ಹೊಂದಿರುತ್ತದೆ. ಹೀಗಾಗಿ ಅದು ಹೃದ್ರೋಗಕ್ಕೂ ಕಾರಣವಾಗುತ್ತವೆ. ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಟ್ರಾನ್ಸ್ ಕೊಬ್ಬು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.

ಸಕ್ಕರೆ ಮತ್ತು ಮೈದಾ ಹೆಚ್ಚು ಇರೋದ್ರಿಂದ ತೂಕ ಕೂಡ ಹೆಚ್ಚಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆ ಆಗುತ್ತದೆ. ಅದಕ್ಕಾಗಿ ಆರೋಗ್ಯ ತಜ್ಞರು ಚಹಾದೊಂದಿಗೆ ರಸ್ಕ್ ಬದಲಿಗೆ ಆರೋಗ್ಯಕರ ಆಹಾರ ತಿನ್ನಲು ಬಯಸುತ್ತಾರೆ. ಹುರಿದ ಮಖಾನ, ಕರಿದ ಕಡಲೆಕಾಳುಗಳನ್ನು ಟೀ ಜೊತೆ ತಿನ್ನಬಹುದು. ಅವು ಪೌಷ್ಟಿಕಾಂಶ ಮಾತ್ರವಲ್ಲದೇ ತೂಕ ನಿಯಂತ್ರಣಕ್ಕೂ ನೆರವಾಗುತ್ತವೆ. ಈ ತಿಂಡಿಗಳು ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್...

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ...

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...