ನಿತ್ಯ ಬಾಳೆಹಣ್ಣು ತಿನ್ನೋದು ಒಳ್ಳೆಯದೇ, ಆದ್ರೆ ಈ ಆಹಾರಗಳ ಜತೆ ಸೇವಿಸಬೇಡಿ!

Date:

ನಿತ್ಯ ಬಾಳೆಹಣ್ಣು ತಿನ್ನೋದು ಒಳ್ಳೆಯದೇ, ಆದ್ರೆ ಈ ಆಹಾರಗಳ ಜತೆ ಸೇವಿಸಬೇಡಿ

ದೇವರ ಕಾರ್ಯಗಳಿಂದ ಹಿಡಿದು ರುಚಿ, ಆರೋಗ್ಯಕ್ಕೂ ಸೈ ಎನಿಸಿಕೊಂಡಿರುವ ಒಂದು ಹಣ್ಣು ಅಂದರೆ ಅದು ಬಾಳೆಹಣ್ಣು. ಬಾಳೆ ಹೂವಿನಿಂದ ಹಿಡಿದು ದಿಂಡು, ಕಾಯಿ, ಹಣ್ಣು, ಅದರ ಎಲೆಯಲ್ಲೂ ಆರೋಗ್ಯದ ಕಣಗಳಿವೆ ಹಾಗೂ ಗುಣಗಳಿವೆ. ಬಾಳೆಹಣ್ಣುಗಳು ಅತ್ಯಂತ ಆರೋಗ್ಯಕರ ಮತ್ತು ಪೌಷ್ಟಿಕಾಂಶದ ಹಣ್ಣು ಎಂಬ ಹೆಗ್ಗಳಿಕೆ ಪಡೆದಿದೆ. ಪ್ರತಿದಿನ ಒಂದು ಬಾಳೆಹಣ್ಣು ತಿಂದರೆ ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಬಾಳೆಹಣ್ಣಿನ ಸೇವನೆ ನಮ್ಮ ದೇಹವನ್ನು ಹಲವಾರು ಕಾಯಿಲೆಗಳಿಂದ ಕೊಡ ಕಾಪಾಡುತ್ತದೆ. ಉದಾಹರಣೆಗೆ ಅಜೀರ್ಣತೆ, ಮಲಬದ್ಧತೆ, ಎದೆಯುರಿ ಇಂತಹ ಸಮಸ್ಯೆಗಳು ದೂರವಾಗುತ್ತವೆ. ಆದರೆ ಬಾಳೆಹಣ್ಣಿನ ಸೇವನೆಯ ಜೊತೆಗೆ ಬೆರೆಸಿ ಸೇವಿಸುವ ಇನ್ನು ಕೆಲವು ಆಹಾರಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ. ಹಾಗಾದರೆ ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ ಬನ್ನಿ.

ಬಾಳೆಹಣ್ಣು ಹಲವು ಬಗೆಯ ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು, ಅದರಲ್ಲಿ ಪ್ರಮುಖವಾಗಿ ಹೃದಯದ ಆರೋಗ್ಯವನ್ನು ಕಾಪಾಡುವ ಮತ್ತು ರಕ್ತದ ಒತ್ತಡವನ್ನು ನಿರ್ವಹಣೆ ಮಾಡುವ ಪೊಟಾಸಿಯಂ ಅನ್ನು ಹೇರಳವಾಗಿ ಒಳಗೊಂಡಿದೆ.

ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಇದರಲ್ಲಿ ಹೇರಳವಾಗಿದ್ದು, ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮೆಟಬೋಲಿಸಂ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ.

ಇದರಲ್ಲಿ ಕರಗುವ ನಾರಿನ ಅಂಶ ಇರುವ ಕಾರಣದಿಂದ ನಮ್ಮ ಜೀರ್ಣ ಶಕ್ತಿ ಹೆಚ್ಚಾಗುತ್ತದೆ ಜೊತೆಗೆ ನೈಸರ್ಗಿಕವಾದ ಸಿಹಿ ಪ್ರಮಾಣ ಇದರಲ್ಲಿ ಇರುವುದರಿಂದ ತಕ್ಷಣವೇ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ. ಬಾಳೆಹಣ್ಣುಗಳಲ್ಲಿ ಪೌಷ್ಟಿಕಾಂಶಗಳ ಪ್ರಮಾಣ ಈ ರೀತಿ ಹೆಚ್ಚಾಗಿರುವುದರಿಂದ ನಮ್ಮ ಸಮಗ್ರ ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು.

* ಹಾಲು ಮತ್ತು ಡೈರಿ ಉತ್ಪನ್ನಗಳು:- ಬಾಳೆಹಣ್ಣುಗಳಲ್ಲಿ ನೈಸರ್ಗಿಕವಾದ ಪ್ರೋಟೀನ್ ಮತ್ತು ನಾರಿನ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. ಜೊತೆಗೆ ಮೆಗ್ನೀಷಿಯಂ, ವಿಟಮಿನ್ ಬಿ, ಫಾಸ್ಫರಸ್, ಪೊಟಾಸಿಯಂ ಇದರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಆದರೆ ಹಾಲು ಮತ್ತು ಡೈರಿ ಉತ್ಪನ್ನಗಳಲ್ಲಿ ಕಂಡುಬರುವಂತಹ ಕೊಬ್ಬಿನ ಪ್ರಮಾಣ ಬಾಳೆಹಣ್ಣಿನ ಈ ಪೌಷ್ಟಿಕಾಂಶಗಳ ಜೊತೆ ಬೆರೆತು ಜೀರ್ಣವಾಗುವುದು ಕಷ್ಟವಾಗುತ್ತದೆ. ಇದರಿಂದ ಆನಂತರದಲ್ಲಿ ಹೊಟ್ಟೆ ಉಬ್ಬರ ಮತ್ತು ಎದೆಯುರಿ ಕಾಣಿಸುತ್ತದೆ

* ಹೆಚ್ಚು ಪ್ರೋಟೀನ್ ಇರುವ ಆಹಾರಗಳು

ಸಾಕಷ್ಟು ಜನರಿಗೆ ತಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚು ಪ್ರೋಟೀನ್ ಇರಬೇಕು ಎನ್ನುವ ಬಯಕೆ ಇರುತ್ತದೆ. ಅದಕ್ಕಾಗಿ ಮಾಂಸಹಾರ ಮತ್ತು ಕೋಳಿ ಮೊಟ್ಟೆಗಳನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುತ್ತಾರೆ.
ಆದರೆ ಡಾಕ್ಟರ್ ಹೇಳುವ ಹಾಗೆ ಬಾಳೆಹಣ್ಣುಗಳ ಜೊತೆ ಇವುಗಳು ಹೊಂದಿ ಕೊಳ್ಳುವುದಿಲ್ಲ. ಏಕೆಂದರೆ ಬಾಳೆಹಣ್ಣು ನಮ್ಮ ದೇಹದಲ್ಲಿ ಸುಲಭವಾಗಿ ಜೀರ್ಣವಾಗುತ್ತದೆ ಆದರೆ ಪ್ರೋಟೀನ್ ಹೊಂದಿರುವ ಆಹಾರಗಳು ಜೀರ್ಣವಾ ಗುವುದು ತುಂಬಾ ನಿಧಾನ.
ಅಷ್ಟು ಮಾತ್ರವಲ್ಲದೆ ಪ್ರೋಟೀನ್ ಆಹಾರಗಳು ನಮ್ಮ ಹೊಟ್ಟೆಯಲ್ಲಿ ಫರ್ಮೆಂಟೇಶನ್ ಪ್ರಕ್ರಿಯೆಗೆ ಒಳಗಾಗುತ್ತವೆ ಮತ್ತು ನಮಗೆ ಗ್ಯಾಸ್ಟ್ರಿಕ್ ಆಗುವಂತೆ ಕೂಡ ಮಾಡುತ್ತವೆ.

* ಸಂಸ್ಕರಿಸಿದ ಕಾರ್ಬೋಹೈಡ್ರೇಟ್:-
ಬಾಳೆಹಣ್ಣನ್ನು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರಗಳ ಜೊತೆ ಸೇವಿಸಬಾರದು. ಅಂದರೆ ಸಿಹಿಯಾದ ಸ್ನಾಕ್ಸ್ ಅಥವಾ ಬೇಕರಿ ಐಟಂಗಳು. ಇದು ಇದ್ದಕ್ಕಿದ್ದಂತೆ ನಮ್ಮ ದೇಹದಲ್ಲಿ ಶುಗರ್ ಲೆವೆಲ್ ಹೆಚ್ಚಾಗುವ ಹಾಗೆ ಮಾಡಬಹುದು ಮತ್ತು ಸುಸ್ತು ಮತ್ತು ಹೊಟ್ಟೆ ಹಸಿವು ಕೂಡ ಇದರಿಂದ ಹೆಚ್ಚಾಗುತ್ತದೆ

* ಬಾಳೆಕಾಯಿ:- ಬಾಳೆಹಣ್ಣಿನ ಜೊತೆ ಬಾಳೆಕಾಯಿ ಸೇವನೆ ಕೂಡ ನಿಷಿದ್ಧ. ಏಕೆಂದರೆ ಮಾಗಿದ ಬಾಳೆಹಣ್ಣು ನಮ್ಮ ದೇಹದಲ್ಲಿ ಬೇಗನೆ ಜೀರ್ಣವಾಗುತ್ತದೆ ಆದರೆ ಬಾಳೆಕಾಯಿ ಅಷ್ಟು ಬೇಗನೆ ಜೀರ್ಣವಾಗುವುದಿಲ್ಲ. ಇದರಲ್ಲಿ ಸ್ಟಾರ್ಚ್ ಪ್ರಮಾಣ ಹೆಚ್ಚಾಗಿರುತ್ತದೆ. ಹೀಗಾಗಿ ಇದು ಹೊಟ್ಟೆ ಉಬ್ಬರ ಅಥವಾ ಗ್ಯಾಸ್ಟ್ರಿಕ್ ಉಂಟು ಮಾಡಬಹುದು

* ಸಿಟ್ರಸ್ ಹಣ್ಣುಗಳು:-

ಬಾಳೆಹಣ್ಣಿನ ಜೊತೆ ಸಿಟ್ರಸ್ ಹಣ್ಣುಗಳು ಅಂದರೆ ನಿಂಬೆಹಣ್ಣು, ದ್ರಾಕ್ಷಿ ಹಣ್ಣು, ಕಿತ್ತಳೆ ಹಣ್ಣು ಅಷ್ಟು ಬೇಗನೆ ಜೀರ್ಣವಾಗುವುದಿಲ್ಲ. ಇವುಗಳು ಹೊಟ್ಟೆಯ ಅಸ್ವಸ್ಥತೆಯನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಬಾಳೆಹಣ್ಣು ಮತ್ತು ನಿಂಬೆ ಹಣ್ಣು ಕಾಂಬಿನೇಷನ್ ನಮ್ ದೇಹದಲ್ಲಿ ಆಮ್ಲಿಯ ಗುಣಲಕ್ಷಣಗಳನ್ನು ಹೆಚ್ಚು ಮಾಡುತ್ತದೆ ಮತ್ತು ಇದು ಹೊಟ್ಟೆಯ ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...