ನಿಮಗೆ ಈ ದೋಷ ಇದ್ಯಾ? ದೇಹದ ಮೇಲೆ ಹಲ್ಲಿ ಬಿದ್ರೆ ಏನರ್ಥ ಗೊತ್ತಾ..?
ಎಲ್ಲರ ಮನೆಗೆ ಹಲ್ಲಿಗಳು ಬರುವುದು ಸಾಮಾನ್ಯ ಸಂಗತಿಯಾಗಿದೆ. ಮನೆಯ ಗೋಡೆಗಳಲ್ಲಿ ಅನೇಕ ಹಲ್ಲಿಗಳು ಓಡಾಡುತ್ತಿರುತ್ತದೆ. ಹಲ್ಲಿಗಳ ಜೊತೆಗೆ ಹಲ್ಲಿಯ ಮರಿಗಳು ಸಹ ಇರುತ್ತದೆ. ಬೇಸಿಗೆ ಹಾಗೂ ಮಳೆಗಾಲದಲ್ಲಿ ಈ ಹಲ್ಲಿಗಳ ಕಾಟ ಜಾಸ್ತಿ ಆಗುತ್ತದೆ. ಯಾರಿಗೂ ಮನೆಯಲ್ಲಿ ಹಲ್ಲಿಗಳು ಇದ್ದರೆ ಇಷ್ಟವಾಗುವುದಿಲ್ಲ. ನಾವು ಹಲ್ಲಿಗಳು ಬಂದಾಗ ಅವುಗಳನ್ನು ಓಡಿಸುತ್ತೇವೆ ಏಕೆಂದರೆ ಅವು ನಮಗೆ ಹಾನಿ ಮಾಡದಿದ್ದರೂ, ಅವು ನಮ್ಮ ಆಹಾರ ಪದಾರ್ಥಗಳನ್ನು ಹಾಳು ಮಾಡುತ್ತದೆ ಎನ್ನುವ ಭಯ ಇರುತ್ತದೆ.
ಹಲ್ಲಿಯ ಬಗ್ಗೆ ಕೆಲವೊಂದು ಪ್ರಮುಖ ವಿಚಾರಗಳನ್ನು ಪರಿಗಣಿಸಲಾಗುತ್ತದೆ ಹಾಗೂ ದೇಹದ ಮೇಲೆ ಹಲ್ಲಿ ಬೀಳುವುದರ ಬಗ್ಗೆ ಕೂಡ ಕೆಲವೊಂದು ಮಾತುಕತೆಗಳು ಇವೆ. ಇನ್ನು ಹಲ್ಲಿ ನಮ್ಮ ದೇಹದ ಬೇರೆ ಬೇರೆ ಭಾಗಗಳ ಮೇಲೆ ಬೀಳುವುದನ್ನ ಜೋತಿಷ್ಯ ಶಾಸ್ತ್ರದಲ್ಲಿ ಬೇರೆ ಬೇರೆ ರೀತಿಯಾಗಿ ಉಲ್ಲೇಖಿಸಲಾಗಿದ್ದು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಇದರ ಅದೃಷ್ಟ ಹಾಗೂ ದುರಾದೃಷ್ಟಗಳ ವಿಚಾರದ ಬಗ್ಗೆ ನೈಜ ಮಾಹಿತಿಯನ್ನು ನೀಡಲು ಹೊರಟಿದ್ದೇವೆ
ಇನ್ನು ಇದರಲ್ಲಿ ಮಹಿಳೆಯರು ಹಾಗೂ ಪುರುಷರ ಮೇಲೆ ಹಲ್ಲಿ ಬೀಳುವುದನ್ನು ಕೂಡ ಬೇರೆ ಬೇರೆ ರೀತಿಯಲ್ಲಿ ವರ್ಗಿಕರಿಸಲಾಗಿದ್ದು ಅವುಗಳ ಪರಿಣಾಮ ಕೂಡ ಬೇರೆ ಬೇರೆ ಆಗಿರುತ್ತವೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗಿದ್ದು ಅವುಗಳನ್ನು ಕೂಡ ವಿಭಿನ್ನವಾಗಿ ನಿಮಗೆ ವಿವರಿಸುವ ಕೆಲಸವನ್ನು ಮಾಡುತ್ತೇವೆ. ಶಾಸ್ತ್ರಗಳ ಪ್ರಕಾರ ನೀವು ಕೇಳಿರಬಹುದು ಬಿಳಿಯ ಹಲ್ಲಿಯನ್ನು ಶುಭಕರ ಎಂಬುದಾಗಿ ಪರಿಗಣಿಸಲಾಗುತ್ತಿದೆ ಹಾಗೂ ಕಪ್ಪು ಹಲ್ಲಿಯನ್ನು ಅಶುಭ ಕರ ಎಂಬುದಾಗಿ ಪರಿಗಣಿಸಲಾಗುತ್ತಿದೆ. ಇನ್ನು ಹಲ್ಲಿಗಳು ಶಬ್ದ ಕೂಡ ನಮ್ಮ ಜೀವನದಲ್ಲಿ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎನ್ನುವಂತಹ ನಂಬಿಕೆ ಕೂಡ ಇದೆ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ಹಲ್ಲಿಯ ಬಗ್ಗೆ ನಿಮಗೆ ತಿಳಿಯದೆ ಇರುವಂತಹ ಕೆಲವೊಂದು ಪ್ರಮುಖ ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ.
ಎಡಗೈ ಮೇಲೆ ಹಲ್ಲಿ ಬೀಳುವುದರಿಂದ ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತದೆ.
* ಎಡಗೈನಲ್ಲಿರುವಂತಹ ಬೆರಳಿಗೆ ಹಲ್ಲಿ ತಾಕಿದರೆ ಇದರಿಂದಾಗಿ ನಿಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳು ಹೆಚ್ಚಾಗುತ್ತವೆ.
* ಪುರುಷರ ಬಲಗೈಗೆ ಹಲ್ಲಿ ತಾಕಿದರೆ ಖಂಡಿತವಾಗಿ ಶೀಘ್ರದಲ್ಲಿ ಗುಡ್ ನ್ಯೂಸ್ ಕೇಳಿ ಬರುತ್ತದೆ.
* ಒಂದು ವೇಳೆ ಹಲ್ಲಿ ನಿಮ್ಮ ತಲೆಯ ಮೇಲೆ ಬಿದ್ದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಆದಷ್ಟು ಬೇಗವಾಗಿ ಧನ ಆಗಮನ ಆಗಲಿದೆ ಹಾಗೂ ಕೈತುಂಬ ಸಂಪಾದನೆ ಆಗಲಿದೆ ಎಂಬುದಾಗಿ ಅರ್ಥವಾಗಿದೆ.
* ಈಗಾಗಲೇ ಹಾಸಿಗೆ ಹಿಡಿದಿರುವಂತಹ ವ್ಯಕ್ತಿಯ ಮೇಲೆ ಒಂದು ವೇಳೆ ಹಲ್ಲಿ ಬಿದ್ರೆ ಅವರ ಮರಣದ ಸಾಧ್ಯತೆ ಹೆಚ್ಚಾಗಿದೆ.
* ಒಂದು ವೇಳೆ ಒಬ್ಬ ವ್ಯಕ್ತಿಯ ಬಲ ಕಿವಿಯ ಮೇಲೆ ಹಲ್ಲಿ ಬಿದ್ದರೆ ಆತನ ಆಯಸ್ಸು ಇನ್ನಷ್ಟು ಹೆಚ್ಚಾಗುತ್ತದೆ ಎಂಬುದಾಗಿ ಪರಿಗಣಿಸಲಾಗುತ್ತದೆ.
* ಒಂದು ವೇಳೆ ಒಬ್ಬ ವ್ಯಕ್ತಿಯ ತುಟಿಯ ಮೇಲೆ ಹಲ್ಲಿ ಬಿದ್ದರೆ ಆತನ ಆರ್ಥಿಕ ಜೀವನ ಸಂಪೂರ್ಣವಾಗಿ ಕೆಳಮಟ್ಟಕ್ಕೆ ಹೋಗುತ್ತದೆ.
* ಒಂದು ವೇಳೆ ನಿಮ್ಮ ಹೃದಯ ಭಾಗಕ್ಕೆ ಹಲ್ಲಿ ಬಿದ್ದರೆ ಅವರ ಮರಣದ ಸಾಧ್ಯತೆ ಹೆಚ್ಚಾಗುತ್ತದೆ.
* ಒಂದು ವೇಳೆ ನಿಮ್ಮ ಮೊಣಕಾಲಿನ ಮೇಲೆ ಬಿದ್ದರೆ ಇದು ನಿಮಗೆ ವಾಹನವನ್ನು ಚಲಾಯಿಸುವುದಕ್ಕೆ ಉತ್ತಮ ಶಕ್ತಿಯನ್ನು ನೀಡುತ್ತದೆ.
ಇನ್ನು ಹಲ್ಲಿ ಪುರುಷರ ದೇಹದ ಬೇರೆ ಬೇರೆ ಭಾಗಗಳಿಗೆ ಬೀಳುವುದರಿಂದ ಏನೆಲ್ಲಾ ಪರಿಣಾಮ ಉಂಟಾಗುತ್ತದೆ ಎಂಬುದನ್ನ ತಿಳಿಯೋಣ
ಒಂದು ವೇಳೆ ಪುರುಷರ ಮುಖದ ಮೇಲೆ ಬಿದ್ದರೆ ಆತನಿಗೆ ಹಣದ ಲಾಭ ಸಿಗಲಿದೆ.
ಪುರುಷರ ಎಡಗಣ್ಣಿನ ಮೇಲೆ ಹಲ್ಲಿ ಬಿದ್ದರೆ ಅದು ಕೂಡ ಶುಭಸೂಚಕವಾಗಿದೆ.
ಹಣೆಯ ಮೇಲೆ ಬಿದ್ದರೆ ನೀವು ನಿಮ್ಮ ಸಂಗಾತಿಯಿಂದ ಬೇರೆ ಆಗುತ್ತಿದ್ದೀರಿ ಎನ್ನುವುದರ ಮುನ್ಸೂಚನೆಯಾಗಿದೆ.
ನಿಮ್ಮ ಬಾಯಿಯ ಮೇಲೆ ಹಲ್ಲಿ ಬಿದ್ದರೆ ನಿಮ್ಮ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಏರುಪೇರು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಅರ್ಥವಾಗಿದೆ.
ನಿಮ್ಮ ಕೈಬೆರಳಿನ ಮೇಲೆ ಬಿದ್ದರೆ ಹಳೆಯ ಸ್ನೇಹಿತರನ್ನು ಅಥವಾ ಹೊಸ ಅತಿಥಿಗಳನ್ನು ನೀವು ಕಾಣಬಹುದಾಗಿದೆ.
ನಿಮ್ಮ ಕಾಲು ಬೆರಳುಗಳ ಮೇಲೆ ಬಿದ್ದರೆ ನಿಮ್ಮ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಏರುಪೇರು ಉಂಟಾಗುವ ಸಾಧ್ಯತೆ ಇದೆ.
ನಿಮ್ಮ ಹಿಮ್ಮಡಿಯ ಮೇಲೆ ಬಿದ್ದರೆ ಯಾವುದಾದರೂ ಗಾಯಗಳು ಉಂಟಾಗುವ ಸಾಧ್ಯತೆ ಇದೆ ಜಾಗೃತರಾಗಿರಿ ಎಂಬುದಾಗಿ ಅರ್ಥವಾಗಿದೆ.
ನಿಮ್ಮ ಎಡ ಕುತ್ತಿಗೆಯ ಮೇಲೆ ಬಿದ್ದರೆ ನಿಮ್ಮ ಜೀವನದಲ್ಲಿ ಯಶಸ್ಸಿನ ಆರಂಭವಾಗಲಿದೆ ಎಂಬುದಾಗಿ ಅರ್ಥವಾಗಿದೆ ಹಾಗೂ ಬಲಗಡೆ ಬಿದ್ದರೆ ನಿಮ್ಮ ಜೀವನದಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಾಗಿದೆ ಎಂಬುದಾಗಿ ಅರ್ಥವಾಗಿದೆ.
ಒಂದು ವೇಳೆ ನಿಮ್ಮ ಎಡಗಾಲಿನ ಮೇಲೆ ಬಿದ್ದರೆ ಸ್ವಲ್ಪ ಮಟ್ಟಿಗೆ ಆರ್ಥಿಕ ನಷ್ಟವನ್ನು ಕಾಣಬೇಕಾಗುತ್ತದೆ ಎಂಬುದಾಗಿ ಅರ್ಥವಾಗಿದೆ.
ನಿಮ್ಮ ಮುಂಭಾಗದಲ್ಲಿ ಕಾಲಿನ ಮೇಲೆ ಬಿದ್ದರೆ ಮುಂದೆ ಕಷ್ಟದ ಸಮಯಗಳು ನಿಮಗಾಗಿ ಕಾದಿವೆ ಎಂಬುದಾಗಿ ಅರ್ಥ.