ಅಡುಗೆ ಮಾಡುವ ಸಮಯದಲ್ಲಿ ಅಡುಗೆ ಮನೆಯು ಶುಚಿತ್ವ ಕಳೆದುಕೊಳ್ಳುವುದು ಸಹಜ. ಇಂತಹ ಸಂದರ್ಭ ಸರಿಯಾದ ರೀತಿಯಲ್ಲಿ ಅಡುಗೆ ಮನೆಯ ಶುಚಿತ್ವ ಕಾಪಾಡಿಕೊಳ್ಳುವುದು ಅತೀ ಅಗತ್ಯ. ಕೆಲವರು ಅಡುಗೆ ಮನೆಗೆ ಪ್ರವೇಶ ಮಾಡಿದರೆ ಸಾಕು ಅಲ್ಲಿ ದೊಡ್ಡ ಕಸದ ರಾಶಿಯೇ ನಿರ್ಮಾಣವಾಗುವುದು.
ಹೀಗಾಗಿ ನಿಮ್ಮ ಅಡುಗೆ ಮನೆಯನ್ನು ಕ್ಲೀನ್ ಮಾಡಿಕೊಂಡರೆ ತುಂಬಾ ಉತ್ತಮ. ನಿಮ್ಮ ಆರೋಗ್ಯವೂ ವೃದ್ದಿಯಾಗುತ್ತದೆ. ನೋಡಲು ಸುಂದರ ಎನಿಸುತ್ತದೆ.
ಸಿಂಕ್‌ನಲ್ಲಿ ಪಾತ್ರೆ ಇಡಬೇಡಿ
ಸಿಂಕ್‌ನಲ್ಲಿ ಪಾತ್ರೆಗಳನ್ನು ಸ್ಟೋರ್ ಮಾಡುವುದನ್ನು ತಪ್ಪಿಸಿ. ಎಲ್ಲ ಪಾತ್ರೆಗಳನ್ನು ನೀರಿನಲ್ಲಿ ತೊಳೆದು, ಶುದ್ಧವಾಗಿ ಒರೆಸಿ, ನಂತರ ಸ್ಥಳಕ್ಕೆ ಜೋಡಿಸಿ ಇಡಬೇಕು.
ಸಿಂಕ್ ಕ್ಲೀನ್ ಮಾಡಿ
ಸಿಂಕ್‌ಅನ್ನು ನಿರಂತರವಾಗಿ ಕ್ಲೀನ್ ಮಾಡಿ. ಪಾತ್ರೆಗಳನ್ನು ತೊಳೆದ ನಂತರ, ಸಿಂಕ್ ಅನ್ನು ಬ್ರಷ್‌ನಿಂದ ಚೆನ್ನಾಗಿ ಕ್ಲೀನ್ ಮಾಡಿ. ವಾರಕ್ಕೆ ಒಂದೊಮ್ಮೆ ಲಿಂಬು ಮತ್ತು ಸೋಡಾ ಬಳಸಿ, ಅಥವಾ ಬೇಕರಿ ಸೋಡಾ ಮತ್ತು ವಿನೆಗರ್ ಬಳಸಿಕೊಂಡು ಹೆಚ್ಚಿನ ಸ್ವಚ್ಛತೆಯನ್ನು ಮಾಡಬಹುದು.
ಫ್ರಿಡ್ಜ್ ಕ್ಲೀನ್ ಮಾಡಿ: ಫ್ರಿಡ್ಜ್‌ನಲ್ಲಿರುವ ಹಳೆಯ ಆಹಾರ ಪದಾರ್ಥಗಳನ್ನು ತಕ್ಷಣವೇ ತೆಗೆದು, ಹೊಸ ಮತ್ತು ತಾಜಾ ಪದಾರ್ಥಗಳನ್ನು ಇಡಿ. ವಾರಕ್ಕೆ ಒಂದೊಮ್ಮೆ ಅಥವಾ ಅಗತ್ಯಬಿದ್ದಂತೆ ಕ್ಲೀನ್ ಮಾಡಿ.
ಬೇಳೆ ಕಾಳು ಚೆಕ್ ಮಾಡಿ
ಅಡುಗೆಮನೆಯ ಬೇರೆಯಾದ ಸ್ಥಳಗಳಲ್ಲಿ ನೀವು ಶೇಖರಣೆ ಮಾಡಿಟ್ಟ ವಸ್ತುಗಳು ಅಂದರೆ ಹಳೆಯ ಬೇಳೆ ಕಾಳುಗಳನ್ನು ಆಗಾಗ ಚೆಕ್ ಮಾಡಿ. ಇಲ್ಲವಾದರೆ ಅದಕ್ಕೆ ಹುಳ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಗಾಳಿ, ಬೆಳಕು:
ಸಾಮಾನ್ಯವಾಗಿ ಎಲ್ಲಾ ಸ್ಥಳಗಳನ್ನು ಪರಿಶೀಲಿಸಿ ಗಾಳಿ, ಬೆಳಕು ಆಡುವಂತೆ ನೋಡಿಕೊಳ್ಳಿ. ಗ್ಯಾಸ್ ಸಿಲೆಂಡರ್ ಇದ್ದರೆ ಅದು ಲೀಕ್ ಆಗುತ್ತಿದೆಯಾ? ಅಥವಾ ಇಲ್ಲವಾ? ಎಂದು ಚೆಕ್ ಮಾಡುವುದು ಕೂಡ ತುಂಬಾ ಮುಖ್ಯ
ಅಡುಗೆ ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಯಾಕೆಂದರೆ ನಿಮ್ಮ ಆರೋಗ್ಯ ಅಡಗಿರುವುದು ಇಲ್ಲೇ ಆಗಿರುತ್ತದೆ. ಎಷ್ಟು ಸ್ವಚ್ಛವಾಗಿಟ್ಟುಕೊಳ್ಳುವಿರೋ ನೀವು ಅಷ್ಟು ಆರೋಗ್ಯವಾಗಿರುತ್ತೀರಾ. ಈ ಸಲಹೆಗಳನ್ನು ಅನುಸರಿಸುವ ಮೂಲಕ, ನಿಮ್ಮ ಅಡುಗೆಮನೆಯ ಶುದ್ಧತೆ ಮತ್ತು ಆರೋಗ್ಯವನ್ನು ಸುಧಾರಿಸಲು ಸಾಧ್ಯವಾಗುತ್ತದೆ