ನಿಮ್ಮ ಫೋಟೋ ಶೂಟ್’ಗಾಗಿ ವಿದ್ಯಾರ್ಥಿಗಳ ಬಲಿ ತೆಗೆದುಕೊಂಡಿದ್ದಾರೆ: ಆರ್.ಅಶೋಕ್ ಕಿಡಿ
ಬೆಂಗಳೂರು: ನಿಮ್ಮ ಫೋಟೋ ಶೂಟ್’ಗಾಗಿ ವಿದ್ಯಾರ್ಥಿಗಳ ಬಲಿ ತೆಗೆದುಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಿಮ್ಮ ಫೋಟೋ ಶೂಟ್ಗಾಗಿ ವಿದ್ಯಾರ್ಥಿಗಳ ಬಲಿ ತೆಗೆದುಕೊಂಡಿದ್ದಾರೆ. ಘಟನೆ ಆದ ಬಳಿಕ ಸಿಎಂ ಎಲ್ಲಿ ಹೋಗಿದ್ದರು ಎಂಬುದೇ ಗೊತ್ತಿಲ್ಲ.
ಡಿಸಿ ತನಿಖೆಗೆ ನಾವು ಒಪ್ಪಲ್ಲ. ಸಾವಿಗೆ ನ್ಯಾಯ ಕೊಡಿ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ಈ ಹೊಣೆಯನ್ನು ರಾಜ್ಯ ಸರ್ಕಾರ, ಸಿಎಂ, ಡಿಸಿಎಂ ಹೊತ್ತು. ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಕೆಎಸ್ಸಿಎ ನಲ್ಲಿ 12 ಗೇಟ್ ಇತ್ತು. ನೀವು ಗೇಟ್ ತೆಗೆದಿದ್ದು 2 ಮಾತ್ರ. ಡಿಕೆ ಶಿವಕುಮಾರ್ ನಿಮಗೆ ಕಾರಿನ ಕಿಟಕಿಯಿಂದ ಬಾವುಟ ಹಿಡಿದು, ತಲೆ ಹೊರಗೆ ಹಾಕಲು ಪರ್ಮಿಷನ್ ಕೊಟ್ಟವರು ಯಾರು?. ನೀವು ಯಾರ ಮೇಲೆ ಕೇಸ್ ಹಾಕುತ್ತೀರ?. ಯಾರನ್ನು ಬಂಧಿಸುತ್ತೀರ?. ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ.
ಆಂಬ್ಯುಲೆನ್ಸ್ ಕೂಡ ಇರಲಿಲ್ಲ. ಮೊದಲು ಮೃತಪಟ್ಟಿದ್ದು ಪೂರ್ಣಚಂದ್ರ ಸಂಜೆ 3.45ಕ್ಕೆ. ಅಷ್ಟೊತ್ತಿಗೆ ಇಲ್ಲಿ ಕಾರ್ಯಕ್ರಮವೇ ಆರಂಭವಾಗಿರಲಿಲ್ಲ. ಎರಡನೇ ಡೆತ್ ಆಗಿದ್ದು ಸಂಜೆ 4.38ಕ್ಕೆ, ಇನ್ನೊಂದು ಡೆತ್ ಆಗಿರುವುದು ಸಂಜೆ 4.45ಕ್ಕೆ.
ಎಲ್ಲಾ ಐಎಎಸ್, ಐಪಿಎಸ್, ಮಿನಿಸ್ಟರ್ ಪಟಾಲಂ ಮಕ್ಕಳು, ಮೊಮ್ಮಕಳೊಂದಿಗೆ ಫೋಟೋ ಶೂಟ್ನಲ್ಲಿ ಬಿಜಿಯಾಗಿದ್ದರು. ಅವರ ಮಕ್ಕಳು, ಮೊಮ್ಮಕ್ಕಳನ್ನು ಕರೆತಂದು ಫೋಟೋ ಶೂಟ್ ಮಾಡಿಸಿದ್ದಾರೆ. ಕೊಹ್ಲಿಯ ಬಟ್ಟೆ ಎಳೆಯುವುದೊಂದು ಬಾಕಿ ಇತ್ತು ಎಂದು ಟೀಕಿಸಿದರು.