ನಿರ್ಭಯಾ ಅತ್ಯಾಚಾರಿಗಳು 8 ವರ್ಷದ ಬಳಿಕ ಕೊನೆಗೂ ಗಲ್ಲಿಗೇರಿದ್ದಾರೆ. ವಿನಯ್ ಕುಮಾರ್ , ಅಕ್ಷಯ್ ಠಾಕೂರ್,ಮುಕೇಶ್ ಸಿಂಗ್ , ಪವನ್ ಗುಪ್ತಾನನ್ನು ತಿಹಾರ್ ಜೈಲಿನಲ್ಲಿ ಇಂದು ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸಲಾಯಿತು.
2012ರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದಿಬ್ಬರಲ್ಲಿ 2013ರಲ್ಲಿ ರಾಮ್ಸಿಂಗ್ ಎಂಬ ಅಪರಾಧಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಬಾಲಾಪರಾಧಿ ಎಂದು ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದಾನೆ.