ವಿಜ್ಞಾನಿಯಾಗಲಿದ್ದವರು ಸ್ವಾಮೀಜಿಯಾದ್ರು – ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸ್ಟೋರಿ 

Date:

ವಿಜ್ಞಾನಿಯಾಗಲಿದ್ದವರು ಸ್ವಾಮೀಜಿಯಾದ್ರು – ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸ್ಟೋರಿ

ವಿಜ್ಞಾನಿಯಾಗಲು ತರಬೇತಿ ಪಡೆದಿದ್ದ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಯೋಗಿಯಾದ ಕಥೆ ಕೇಳಿದರೆ ಎಲ್ಲರಿಗೂ ಅಚ್ಚರಿಯಾಗುತ್ತದೆ!
ಶ್ರೀಗಳು ಮನಸ್ಸು ಮಾಡಿದ್ರೆ, ವಿದೇಶಗಳಿಗೆ ಹೋಗಿ ತಮ್ಮ ಜ್ಞಾನದ ಹರಿವನ್ನು ಪಸರಿಸಬಹುದಿತ್ತು.. ಅವರು ಮನಸ್ಸು ಮಾಡಿದ್ರೆ ಹಲವು ಸಂಶೋಧನೆಗಳಿಗೆ ಪ್ರಥಮ ಎಂದೆನಿಸಿಕೊಳ್ಳಬಹುದಿತ್ತು.. ಐಶಾರಾಮಿ ಜೀವನ ನಡೆಸಬಹುದಿತ್ತು. ಆದ್ರೆ ಕರ್ಮ ಹಾಗೂ ಧರ್ಮದ ಯುದ್ಧಕ್ಕೆ ಮನಸೋತು ಖಾವಿ ತೊಟ್ಟಿದ್ದಾರೆ. ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ.
ನೋಡಿ ಎಂತಹ ಆಶ್ಚರ್ಯ..! ಅಂದು ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಮಠದ ವಿದ್ಯಾರ್ಥಿ ನಿಲಯದಲ್ಲಿ ಸೀಟಿಗೆ ಪರದಾಡಿದ್ದವರು ಇವರು. ಈಗ ನಾಡಿನ ಅತಿದೊಡ್ಡ ಮಠದ ಪೀಠಾಧಿಪತಿಯಾಗುವವರೆಗೆ ಬೆಳೆದಿದ್ದು ಇತಿಹಾಸ. ಇಷ್ಟು ಹೇಳಿದ್ರೆ ನಿಮ್ಮ ಕಲ್ಪನಾ ಪರದೆಯ ಮೇಲೆ ಮೂಡಿಬರುವ ಚಿತ್ತಾರವೇ ಚುಂಚನಗಿರಿ ಮಠದ 72ನೇ ಪೀಠಾಧಿಕಾರಿಗಳಾದ ನಿರ್ಮಲಾನಂದನಾಥ ಸ್ವಾಮೀಜಿಯವರು.
ಶ್ರೀಗಳು ಜು 20, 1969ರಂದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೀರನಹಳ್ಳಿಯಲ್ಲಿ ಜನಿಸಿದ್ರು. ತಂದೆ ನರಸೇಗೌಡ, ತಾಯಿ ನಂಜಮ್ಮ. ಈ ದಂಪತಿಗೆ ಆರು ಜನ ಮಕ್ಕಳು. ಇದರಲ್ಲಿ 4ನೇಯವರೆ ನಿರ್ಮಲಾನಂದನಾಥ ಸ್ವಾಮೀಜಿಯವರು. ಇವರ ಪೂರ್ವಾಶ್ರಮದ ಹೆಸರು ಸಿ.ಎನ್. ನಾಗರಾಜ್. ಜೀವನೋಪಾಯಕ್ಕೆ ಇವರ ಕುಟುಂಬ ಕೂಲಿ ಮಾಡುತ್ತಿತ್ತು. ಈಗಲೂ ಇವರ ಕುಟುಂಬ ಇದೇ ವೃತ್ತಿಯನ್ನು ಮಾಡುತ್ತಿದೆ.
ಕೂಲಿ ಮಾಡುತ್ತಲೇ ಪ್ರಾಥಮಿಕ ಶಿಕ್ಷಣ- ಮಾವಿನಹಳ್ಳಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣವನ್ನು ಮಾವಿನಹಳ್ಳಿ ಪ್ರಗತಿಪರ ವಿದ್ಯಾವರ್ಧಕ ಶಾಲೆಯಲ್ಲಿ ಪೂರ್ಣಗೊಳಿಸಿದರು. ಈ ಶಾಲೆಯಲ್ಲಿ ಈಗಿನ ಶ್ರೀಗಳು, ಆಗಿನ ಸಿ.ಎನ್ . ನಾಗರಾಜ್ ಪಡೆದಷ್ಟು ಅಂಕಗಳನ್ನು ಯಾರೂ ಪಡೆದಿಲ್ಲ ಎಂಬುದೇ ಇತಿಹಾಸ. ನಂತರ ಸ್ವಾಮೀಜಿಯವರು ಡಿಪ್ಲೋಮಾ ಪಾಲಿಟೆಕ್ನಿಕ್ ಅಧ್ಯಯನ ಮಾಡಿದ್ರು. ಗುಬ್ಬಿ ಶಾಸಕರೊಬ್ಬರ ಸಹಾಯವಿಲ್ಲದೆ ಇದ್ದಿದ್ರೆ ಶ್ರೀಗಳ ವಿದ್ಯಾಭ್ಯಾಸ ಅರ್ಧಕ್ಕೆ ನಿಂತುಹೋಗುತ್ತಿತ್ತಂತೆ. ಡಿಪ್ಲೋಮಾ ಬಳಿಕ, ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಮುಗಿಸಿದ್ರು. ನಂತರ IITಯಲ್ಲಿ ಎಂಟೆಕ್ ಮುಗಿಸಿದ್ರು. ಇನ್ನೇನು ವಿದೇಶದಲ್ಲಿ ಸೆಟಲ್ ಆಗುವ ಕನಸು ದೂರವಿರಲಿಲ್ಲ.
ಅದಕ್ಕೂ ಮೊದಲು ಬೆಂಗಳೂರಿನ ವಿಜಯನಗರ ಹಾಸ್ಟೆಲ್ಗೆ ಭೇಟಿ ನೀಡಿ ಸ್ನೇಹಿತರನ್ನು ಮಾತನಾಡಿಸುವ ಆಸೆ ಹೊಂದಿದ್ರು ಶ್ರೀಗಳು. ಬೆಂಗಳೂರಿಗೆ ಬಂದಾಗ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು, ಆ ಹುಡುಗನನ್ನು ಚುಂಚನಗಿರಿಗೆ ಕರೆ ತರುವಂತೆ ಆದೇಶಿಸಿದ್ದರಂತೆ. ಸ್ವಾಮೀಜಿಯವರ ಬಳಿ ಇವರನ್ನು ಕರೆದುಕೊಂಡು ಹೋಗಬೇಕಾದ್ರೆ, ಮಠದ ಮ್ಯಾನೆಜ್ಮೆಂಟ್ಗೆ ಇವರು ಬಹಳ ಸತಾಯಿಸಿದ್ರಂತೆ.

ಅಷ್ಟೇ ಅಲ್ಲ, ಶ್ರೀಗಳನ್ನು ಕೋಠಡಿಯಲ್ಲೇ ಇರಿಸಲಾಗಿತ್ತಂತೆ. ಕೊನೆಗೆ ಆ ಕೊಠಡಿಯಿಂದ ಹೊರ ಬಂದು ಓಡಿ ಹೋಗಿದ್ದರನ್ನು ಕರೆತಂದಿದ್ದೂ ಉಂಟು. ಹೇಗೋ, ಚುಂಚನಗಿರಿ ಮಠಕ್ಕೆ ಕರೆತಂದು ನಾಳೆಯೇ ಗುರು ಪೂರ್ಣಿಮೆ, ನಿಮಗೆ ದೀಕ್ಷೆ ಕೊಡುತ್ತೇನೆಂದು ಬಾಲಗಂಗಾಧರನಾಥ ಸ್ವಾಮೀಜಿಯವರು ಹೇಳಿದರಂತೆ ಅಷ್ಟೇ. ಇನ್ನು ಅಷ್ಟಕ್ಕೆಯೇ ಸುಮ್ಮನೆ ತಲೆ ಅಲ್ಲಾಡಿಸಿದ ನಿರ್ಮಲಾನಂದನಾಥ ಸ್ವಾಮೀಜಿಯವರು ಮರುದಿನವೇ ಇನ್ನಿತರರೊಂದಿಗೆ ದೀಕ್ಷೆ ಪಡೆದಿದ್ದು ಇತಿಹಾಸ.
ಇನ್ನು ಮೊದಲು ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಮೊದಲಿಗೆ ರಾಮನಗರ ಬಳಿಯ ಬಾನಂದೂರು ಮಠಕ್ಕೆ ಕಳುಹಿಸಿಕೊಡಲಾಯಿತು. ನಂತರ ಚಿಕ್ಕಬಳ್ಳಾಪುರ ಶಾಖಾಮಠಕ್ಕೆ ಬಾಲಗಂಗಾಧರನಾಥ ಸ್ವಾಮೀಜಿಯವರು ನೇಮಿಸಿದರು. ಚಿಕ್ಕಬಳ್ಳಾಪುರದ ಮಠವನ್ನು ಸಾಕಷ್ಟು ಅಭಿವೃದ್ಧಿಗೊಳಿಸಿದ ಜೊತೆ ಜೊತೆಯಲ್ಲೇ ಬಾಲಗಂಗಾಧರನಾಥ ಸ್ವಾಮೀಜಿಯವರ ಅಚ್ಚುಮೆಚ್ಚಿನ ಶಿಷ್ಯರಾದರು. ಈಗ ಚುಂಚನಗಿರಿಯ ಮಠದ 72ನೇ ಪೀಠಾಧಿಕಾರಿಗಳಾಗಿ ಸಾಮಾಜಿಕ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಬಡತನವನ್ನು ಮೆಟ್ಟಿನಿಂತು. ಪ್ರತಿಭಾವಂತ ವಿದ್ಯಾರ್ಥಿಯಾಗಿ, ದೇಶದ ಸಂಶೋಧನಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಲು ವಿಜ್ಞಾನಿ ಆಗಲು ಹೊರಟಿದ್ದವರು, ಈಗ ಸಾಮಾಜಿಕ, ಹಾಗೂ ಧಾರ್ಮಿಕ ಕೈಂಕರ್ಯಗಳ ಮೂಲಕ ಲೋಕದ ಡೊಂಕನ್ನು ತಿದ್ದಲು ಮುಂದಾಗಿರುವ ಶ್ರೀಗಳ ದೊಡ್ಡ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...