ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ.!

By
0 Min Read

ಬೆಂಗಳೂರು: ನಿರ್ಮಾಪಕ ಸೌಂದರ್ಯ ಜಗದೀಶ್ ಸೂಸೈಡ್ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿ ಈ ಘಟನೆ ನಡೆದಿದೆ. ಸದ್ಯ ಸುಗುಣ ಆಸ್ಪತ್ರೆಯಲ್ಲಿ ಅವರ ಮೃತದೇಹ ಇಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗಷ್ಟೇ ಅದ್ಧೂರಿಯಾಗಿ ಮಗಳ ಮದುವೆ ಮಾಡಿದ್ದರು ಸೌಂದರ್ಯ ಜಗದೀಶ್.
ಮಗಳ ಮದುವೆ ಸಂದರ್ಭದಲ್ಲಿ ಖುಷಿ ಖುಷಿಯಾಗಿಯೇ ಇದ್ದರು. ಇದೀಗ ಅವರ ಹಠಾತ್ ನಿಧನ ಚಿತ್ರರಂಗಕ್ಕೆ ಶಾಕ್ ಕೊಟ್ಟಿದೆ. ಉದ್ಯಮಿಯಾಗಿದ್ದ ಜಗದೀಶ್ ಅವರು ಅಪ್ಪು & ಪಪ್ಪು, ಸ್ನೇಹಿತರು, ರಾಮ್ ಲೀಲಾ, ಮಸ್ತ್ ಮಜಾ ಮಾಡಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.

Share This Article