ನೆಪ ಹೂಡಿ ಬರುವ ಹಳೆಯ ನೆನಪುಗಳ ತಡೆಯಬಹುದೇ?

Date:

ಸೂರ್ಯ ತನ್ನ ಮನೆಗೆ ತೆರಳುವ ಸಮಯವದು. ಹಕ್ಕಿಗಳು ಗೂಡು ಸೇರುವುದು ಆ ಸೂಚನೆಯಿಂದಲೇ. ಆ ಕಡಲ ತೀರದ ಮರೆಯಲ್ಲಿ ಮರೆಯಾಗುತ್ತಿದ್ದ ಸೂರ್ಯ ಆ ಸಂಜೆಯ ಅಂದವನ್ನ ಹೆಚ್ಚಿಸಿದ್ದ. ಇನ್ನು ಸ್ವಲ್ಪ ಜನ ಆ ಸುಂದರ ಕ್ಷಣಗಳನ್ನ ಸೆರೆಹಿಡಿಯುವಲ್ಲಿ ಮಗ್ನರಾಗಿದ್ದರೆ, ಇನ್ನು ಕೆಲವರು ಅಲೆಯೊಂದಿಗೆ ಆಟವಾಡುತ್ತಾ ಸಮಯ ಕಳೆಯುತ್ತಿದ್ದರು. ಇನ್ನು, ಪ್ರೇಮ ಪಕ್ಷಿಗಳು ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದರು. ಆ ಸಂಜೆ ಎಲ್ಲರಿಗೂ ಖುಷಿಯನ್ನು ಉಣಿಸುವ ಸಮಯವಾಗಿತ್ತು. ಅವುಗಳೆಲ್ಲದರ ಮಧ್ಯ ಕುಳಿತ ನನಗೆ ನನ್ನ ಒಂಟಿತನದ ಅಲೆ ಬಂದು ಅಬ್ಬರಿಸಿದಂತಾಗಿತ್ತು. ಆ ಸುಂದರ ಸಂಜೆ ನಿನ್ನ ನೆನಪನ್ನ ಮನದಲ್ಲಿ ಅಪ್ಪಳಿಸುವಂತೆ ಮಾಡಿತ್ತು. ನಿನ್ನ ಮರೆಯಬೇಕೆಂದು ಅದೆಷ್ಟು ಪ್ರಯತ್ನಿಸಿದರೂ ನನ್ನ ಪ್ರಯತ್ನ ವಿಫಲ. ಆ ತೀರದಲ್ಲಿ ನಮ್ಮಿಬ್ಬರ ಹೆಸರನ್ನು ಬರೆದು ಖುಷಿಪಟ್ಟಿದ್ದೆವು. ಅಲೆಯು ಬಂದು ಅಳಿಸಿದ ದೃಶ್ಯ ಈಗ ಕಾಡತೊಡಗಿದೆ. ನಿನ್ನ ಜೊತೆ ಕಳೆದ ಕ್ಷಣವು ಅಷ್ಟು ಬೇಗ ಅಳಿಸಿ ಹೋಗುತ್ತದೆ ಎಂದು ಕನಸಲ್ಲೂ ಎಣಿಸಿರಲಿಲ್ಲ. ನೀನಾಡಿದ ಮಾತುಗಳು ನಾವು ಕಳೆದ ಆ ಸುಂದರ ಕ್ಷಣಗಳು ಇಂದು ಆ ಕಡಳಿನಾಳದಲ್ಲಿ ಮೌನವಾಗಿ ಕುಳಿತಂತಿದೆ. ಆ ಕಡಲ ತೀರದಲ್ಲಿಯೇ ಹೆಚ್ಚು ಸಮಯ ನಿನ್ನೊಂದಿಗೆ ಕಳೆದ ನನಗೆ ಇಂದೇಕೋ ಆ ಜಾಗ ಬೇಸರ ಮೂಡಿಸಿದೆ. ಅಲ್ಲಿನ ಅಲೆಗಳು ಪಕ್ಷಿಗಳೂ ಕೂಡ ನಿನ್ನ ಗೆಳೆಯನೆಲ್ಲಿ? ಎಂದು ಪ್ರಶ್ನಿಸಿದಂತೆ ಭಾಸವಾಗುತ್ತಿದೆ. ಅದೆಷ್ಟೋ ದಿನಗಳು ನೀನಿಲ್ಲದೆ ಕಳೆಯಿತು, ನೆನಪು ಮಾತ್ರ ಇಂದಿಗೂ ಜೀವಂತ. ಎಂದಿಗೂ ಕೇಳುವುದಿಲ್ಲ ಹೇಳಿ ಹೋಗು ಕಾರಣ.. ಎಂದು ಆ ಸುಂದರ ಸಂಜೆಯ ಕ್ಷಣವನ್ನ ಖುಷಿಯಿಂದ ಅನುಭವಿಸಬೇಕೆಂದಿದ್ದ ನನಗೆ, ನಿನ್ನ ನೆನಪು ಅಡ್ಡಿಯಾಯಿತು. ಆದರೂ ಸುಂದರ ನಾಳೆಗಾಗಿ ಕನಸು ಹೊತ್ತ, ಮತ್ತೆ ಇದೇ ತೀರದಲ್ಲಿ ಬಂದು ಕುಳಿತು ಆ ಖುಷಿಯನ್ನ ಪ್ರಕೃತಿಯೊಂದಿಗೆ ಹಂಚಿಕೊಳ್ಳುವಾಸೆ. ಆ ಆಸೆಯ ಮುಂದೆ ನಿನ್ನ ನೆನಪುಗಳನ್ನು ಕಣ್ಣೀರೆಂಬ ನದಿಗೆ ಕಾಣಿಕೆಯಾಗಿ ನೀಡುತ್ತಿದ್ದೇನೆ. ನನ್ನ ಸುಂದರ ನಾಳೆಗಳಿಗೆ ನಿನ್ನ ನೆನಪನ್ನು ನನ್ನಿಂದ ಹಾಗೂ ಈ ಕಡಲ ತೀರದಿಂದ ದೂರ ಮಾಡುವ ಸಾಮರ್ಥ್ಯವಿದೆ. ಮತ್ತೆ ನಾಳೆ ಸುಂದರ ಸಂಚಿಕೆಯಲ್ಲಿ ಅದೇ ತೀರದಲ್ಲಿ ಒಂಟಿಯಾಗಿ ಕುಳಿತುಕೊಳ್ಳುವ ನನಗೆ ಯಾವುದೆ ನೆನಪುಗಳಿಲ್ಲ, ಬೇಸರಗಳಿಲ್ಲ. ಕೇವಲ ಭರವಸೆಯ ಸುಂದರ ಬದುಕು. ತಂಗಾಳಿಯ ತಂಪಿನೊಂದಿಗೆ ನಿಟ್ಟುಸಿರು. ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆಪವ ಹೂಡಿ ತರುತಿದೆ ಮತ್ತೆ ಹಳೆಯ ನೆನಪು!

– ಶೃತಿ ಹೆಗಡೆ ಹುಳಗೋಳ

ಅವಳ ಪ್ರೀತಿಗಾಗಿ ಐದು ವರ್ಷ ಕಾದ..!

ಮೋಸಮಾಡಿದ ಹುಡುಗಿಗೇ ಕೆಲಸ ಕೊಟ್ಟು, ಮದುವೆಯೂ ಆದವನ ಸ್ಟೋರಿ..!

ಹಠಮಾರಿ ಹುಡುಗಿ, ಹುಚ್ಚು ಹುಡುಗನ ಮದುವೆ ಸ್ಟೋರಿ ಇದು..!

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...