ನೆಲಮಂಗಲ: ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು!
ನೆಲಮಂಗಲ: ರಸ್ತೆ ಅಪಘಾತದಲ್ಲಿ ಬೈಕ್ ಸವಾರನೋರ್ವ ಸಾವನ್ನಪ್ಪಿರುವ ಘಟನೆ ನೆಲಮಂಗಲ ಬಳಿಯ ಮಾಕಳಿ ಬಳಿ ಜರುಗಿದೆ. ಹನುಮಂತಪ್ಪ ಬೇವೂರು (37) ಮೃತ ಬೈಕ್ ಸವಾರ.
ಕೃಪ ಟ್ರಾನ್ಸಪೋರ್ಟ್ ಮಾಲೀಕನಾಗಿದ್ದ ಹನುಮಂತಪ್ಪ ಅವರು, ಮೂಲತಃ ಕೊಪ್ಪಳದವನಾಗಿದ್ದು, 10 ವರ್ಷದ ಹಿಂದೆ ಕೆಲಸ ಹರಸಿ ಬೆಂಗಳೂರಿಗೆ ಬಂದಿದ್ದರು. ಎಂದಿನಂತೆ ಆಫೀಸ್ ಗೆ ತೆರಳಲು ಹನುಮಂತಪ್ಪ ಮುಂದಾಗಿದ್ದ. ಈ ವೇಳೆ ್ಯಾಂಟ್ರೋ ವಾಹನ ಬೈಕ್ ನಡುವೆ ಅಪಘಾತವಾಗಿ ಸವಾರ ಸಾವನ್ನಪ್ಪಿದ್ದಾರೆ.
ನೆಲಮಂಗಲ ಬಳಿಯ ಮಾಕಳಿ ಬಳಿ ಅಪಘಾತ ಸಂಬಂಧಿಸಿದ್ದು, ಘಟನೆ ಸಂಬಂಧ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.
ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.