ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಬಗ್ಗೆ ನಿಮಗೆಲ್ಲರಿಗೂ ಬಹುತೇಕ ತಿಳಿದೇ ಇರುತ್ತದೆ. ತಮ್ಮ ಉತ್ತಮ ಕಾರ್ಯವೈಖರಿ ನಿಷ್ಟಾವಂತ ತೆಯಿಂದ ಜನಪ್ರಿಯ ಆಗಿರುವ ರೋಹಿಣಿ ಸಿಂಧೂರಿ ಅವರು ಇದೀಗ ಮತ್ತೊಮ್ಮೆ ಸಾರ್ವಜನಿಕರ ಮನಸ್ಸನ್ನು ಗೆದ್ದಿದ್ದಾರೆ.
ಹೌದು ರೋಹಿಣಿ ಸಿಂಧೂರಿ ಅವರು ತಮ್ಮ ಕುಟುಂಬದವರ ಜೊತೆ ಪ್ರವಾಸಕ್ಕೆ ತೆರಳಿದ್ದಾಗ ಅವರ ಕಾರು ಪಂಚರ್ ಆಗಿದೆ. ಈ ವೇಳೆಯಲ್ಲಿ ಸ್ವತಃ ಅವರೇ ತಮ್ಮ ಕಾರಿನ ಟಯರ್ ಚೇಂಜ್ ಮಾಡುವುದರ ಮುಖಾಂತರ ಸರಳತೆ ಮೆರೆದಿದ್ದಾರೆ. ಹೌದು ಉನ್ನತ ಸ್ಥಾನದಲ್ಲಿದ್ದರೂ ಸಹ ಕೊಂಚವೂ ಅಹಂಕಾರವಿಲ್ಲದೆ ರೋಹಿಣಿ ಸಿಂಧೂರಿ ಅವರು ನಡುರಸ್ತೆಯಲ್ಲಿ ತಮ್ಮ ಕಾರಿನ ಚಕ್ರವನ್ನು ಬದಲಿಸಿದ್ದಾರೆ. ಈ ವಿಡಿಯೋವನ್ನು ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ..
ಕೊಂಚ ಫೇಮಸ್ ಆದರು ಸಾಕು ಕಾರಿನ ಡೋರ್ ತೆಗೆಯಲು ಕೆಲಸಗಾರರನ್ನು ಇಟ್ಟುಕೊಳ್ಳುವ ಜನರು ಇರೋ ಇಂತಹ ಕಾಲದಲ್ಲಿ ಉನ್ನತ ಅಧಿಕಾರಿಯಾಗಿದ್ದರೂ ಸಹ ಈ ರೀತಿ ನಡು ರಸ್ತೆಯಲ್ಲಿ ಟಯರ್ ಚೇಂಜ್ ಮಾಡುವ ಸರಳ ಜೀವಿ ನಮ್ಮ ನಡುವೆ ಇದ್ದಾರೆ ಎಂಬುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ನೆಟ್ಟಿಗರು ರೋಹಿಣಿ ಸಿಂಧೂರಿ ಅವರನ್ನು ಹಾಡಿ ಹೊಗಳುತ್ತಿದ್ದಾರೆ.