2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ಮಹೇಂದ್ರ ಸಿಂಗ್ ಧೋನಿ ತಂಡದಿಂದ ದೂರ ಉಳಿದಿದ್ದಾರೆ. ಧೋನಿ ಅವರ ನಂತರ ಯುವ ಆಟಗಾರ ರಿಷಭ್ ಪಂತ್ ಟೀಮ್ ಇಂಡಿಯಾದ ಖಾಯಂ ವಿಕೆಟ್ ಕೀಪರ್ ಎಂದು ಹೇಳಲಾಗಿತ್ತು. ಏಕದಿನ, ಟಿ20 ಮತ್ತು ಟೆಸ್ಟ್ ಮೂರೂ ಮಾದರಿಯ ಕ್ರಿಕೆಟ್ಗೆ ಪಂತೇ ಅವರನ್ನೇ ಗಟ್ಟಿ ಮಾಡುವ ನಿಟ್ಟಿನಲ್ಲಿ ಬಿಸಿಸಿಐ ಪಂತ್ ಅವರನ್ನು ಎಲ್ಲಾ ಟೂರ್ನಿಗೂ ಆಯ್ಕೆ ಮಾಡುತ್ತಿದೆ. ಆದರೆ, ಪಂತ್ ವಿಶ್ವಕಪ್ ಬಳಿಕ ಆಡಿದ ಒಂದೇ ಒಂದು ಟೂರ್ನಿ ಬಿಡಿ, ಪಂದ್ಯದಲ್ಲೂ ಹೇಳಿಕೊಳ್ಳುವಂಥಾ ಪ್ರದರ್ಶನ ನೀಡುತ್ತಿಲ್ಲ.
ಇತ್ತ ಕನ್ನಡಿಗ ಕೆ.ಎಲ್ ರಾಹುಲ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಪಂತ್ ಬದಲು ವಿಕೆಟ್ ಕೀಪಿಂಗ್ ಮಾಡಿ ಸೈ ಎನಿಸಿಕೊಂಡ ರಾಹುಲ್ ನ್ಗೂಜಿಲೆಂಡ್ ವಿರುದ್ಧದ ಟಿ20 ಹಾಗೂ ಒಡಿಐ ಟೂರ್ನಿಗೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಆಯ್ಕೆಯಾದರು. ಭಾರತ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಪ್ರಮುಖಪಾತ್ರವಹಿಸಿದ ರಾಹುಲ್ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದ್ರು. ಆರಂಭಿಕರಾಗಿ ಹಾಗೂ ವಿಕೆಟ್ ಕೀಪರ್ ಆಗಿ ರಾಹುಲ್ ಯಶ ಕಂಡರು. 5ನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದರಿಂದ ನಾಯಕತ್ವವಹಿಸಿಕೊಂಡಿದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ವೇಳೆ ಗಾಯಗೊಂಡಿದ್ದರಿಂದ ಫೀಲ್ಡಿಂಗ್ ಟೈಮಲ್ಲಿ ರಾಹುಲ್ ತಂಡವನ್ನು ಮುನ್ನಡೆಸಿ ಹೊಸ ಜವಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ರು.
ನಂತರ 30 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮುಖಭಂಗ ಅನುಭವಿಸಿದರು. ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಶಕ್ತಿಯಾಗಿದ್ದರು. ಯಾವ್ದೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಲು ಸಿದ್ದ, ವಿಕೆಟ್ ಕೀಪಿಂಗೂ ರೆಡಿ ಎಂದು ಸಾಬೀತುಪಡಿಸಿ, ನಾಯಕತ್ವದಲ್ಲೂ ಸೈ ಎನಿಸಿಕೊಂಡಿರುವ ರಾಹುಲ್ ಟೆಸ್ಟ್ನಲ್ಲಿ ಖಾಯಂ ಸ್ಥಾನಪಡೆದಿಲ್ಲ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳಿಂದ ಸೋತಿದೆ. ಈ ಸೋಲಿಗೆ ಬ್ಯಾಟಿಂಗ್ ವೈಫಲ್ಯ ಪ್ರಮುಖ ಕಾರಣ. ರಿಷಭ್ ಪಂತ್ ಟೆಸ್ಟ್ನಲ್ಲೂ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ ಮುಂದಿನ ಟೂರ್ನಿಗಳಲ್ಲಿ ರಾಹುಲ್ ಟೆಸ್ಟ್ ತಂಡಕ್ಕೂ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
ಪಂತ್ ವೈಫಲ್ಯ ; ಟೆಸ್ಟ್ನಲ್ಲೂ ಕನ್ನಡಿಗ ರಾಹುಲ್ಗೆ ಸ್ಥಾನ?
Date: