ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮುದ್ದಾದ ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಅಲ್ಲದೆ ಆತ ಮಾಡಿಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾರಣ ಆತಂಕ ಸೃಷ್ಠಿಸುತ್ತದೆ.
ಲಾಟರಿಯಿಂದ ಆರ್ಥಿಕ ಸಂಕಷ್ಟ ಅನುಭವಿಸಿದ ಅಕ್ಕಸಾಲಿಗ ಪತ್ನಿ ಹಾಗೂ ಮೂವರು ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಲ್ಲುಪುರಂನಲ್ಲಿ ನಡೆದಿದೆ.
ಅರುಣ್ (೩೩) ತನ್ನ ಪತ್ನಿ ಎಂ ಶಿವಗಾಮಿ (೨೬) , ಪ್ರಿಯದರ್ಶಿನಿ (೪), ಯುವಶ್ರೀ (೩) ಹಾಗೂ ಭಾರತಿ (೩ ತಿಂಗಳು) ಎಂಬ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದಾತ.
ಅರುಣ್ ಸಾಯುವ ಮುನ್ನ “ರಾಜ್ಯದಲ್ಲಿ ೧೫ ವರ್ಷಗಳಿಂದ ಎಲ್ಲಾ ರೀತಿಯ ಲಾಟರಿಗಳು ನಿಷೇಧವಾಗಿದ್ದರೂ ಅಕ್ರಮವಾಗಿ ಲಾಟರಿಯನ್ನು ದಂದೆ ನಡೆಯುತ್ತಿದೆ. ಇದನ್ನು ತಡೆಗಟ್ಟಬೇಕು. ಅದರಿಂದಾಗಿ ಆರ್ಥಿಕ ತೊಂದರೆ ಅನುಭವಿಸುತ್ತಿರುವ ೧೦ ಕುಟುಂಬವಾದರೂ ಬದುಕಿ ಉಳಿಯ ಬಹುದು” ಎಂದು ವಿಡಿಯೋ ಮಾಡಿದ್ದಾನೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.

ವಿಲ್ಲುಪುರಂ ಜಿಲ್ಲಾ ಪೊಲೀಸ್ ಅಧೀಕ್ಷಕ ಎಸ್.ಜಯಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಕ್ರಮ ಲಾಟರಿ ದಂದೆ ವಿರುದ್ಧ ನಿರಂತರವಾಗಿ ಕ್ರಮಕೈಗೊಳ್ಳುತ್ತಿದ್ದೇವೆ. ಅರುಣ್ ಆನ್ಲೆöÊನ್ ಲಾಟರಿ ಗೀಳಿಗೆ ತುತ್ತಾಗಿರಬೇಕು. ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.






