ಇದನ್ನು ಪದೇ ಪದೇ ಬ್ರೇಕಪ್ ಆಗ್ತಿರೋರು ಓದಲೇ ಬೇಕು. ನಿಮಗಾಗಿಯೇ ಇದು…!
ಯಾವ್ದೇ ಸಂಬಂಧಗಳಲ್ಲಿ ಜಗಳ, ಸ್ವಲ್ಪ ದಿನ ಮಾತು ಬಿಡೋದು ಎಲ್ಲಾ ಕಾಮನ್. ಆದ್ರೆ, ಪದೇ ಪದೇ ಬ್ರೇಕಪ್ ಆಗೋದು ಮನಸ್ಸಿನ ಮೇಲೆ ಕೆಟ್ಟಪರಿಣಾಮ ಬೀರುತ್ತದೆ.
ಪದೇ ಪದೇ ಬ್ರೇಕಪ್ ಆಗಿ ಮತ್ತೆ ಮತ್ತೆ ಪ್ಯಾಚಪ್ ಮಾಡಿದ್ರೂ ಸರಿ ಆಗಲ್ಲ.
ದಾಂಪತ್ಯ ವಿಚಾರ, ಪ್ರೀತಿ ವಿಚಾರದಲ್ಲಿ ಪದೇ ಪದೇ ಬ್ರೇಕಪ್ ಆಗ್ತಿದ್ರೆ, ಬೇರೆ ಸಂಬಂಧ ಹುಡುಕುವ ಮುನ್ನ ಆಪ್ತಸಮಾಲೋಚನೆಗೆ ಒಳಪಡಿ. ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ.
ಸಂಬಂಧ ಬಂಧನ ಅನಿಸಿದರೂ ಆ ಬಂಧದಿಂದ ಬಿಡಿಸಿಕೊಳ್ಳಿ. ಇಲ್ಲ ಒಬ್ಬರಿಗೊಬ್ಬರು ಸಮಾಧಾನಪಡಿಸಿಕೊಂಡು ಸರಿಯಾಗಿ.
ನೀವು ಒಮ್ಮೊಮ್ಮೆ ಅನ್ಕೊಳ್ಬಹುದು, ಇವರಿಲ್ಲದೇ ಇದ್ದರೆ, ಇನ್ನೊಬ್ಬರು, ಅವರೂ ಇಲ್ಲದಿದ್ದರೆ ಮತ್ತೊಬ್ಬರು ಅಂತ. ಆದ್ರೆ, ನಿಮ್ಗೆ ಗೊತ್ತೋ ಗೊತ್ತಿಲ್ದೆ ಸಾಲು ಸಾಲು ಬ್ರೇಕಪ್ ಗಳಿಂದ ಖಿನ್ನತೆಗೆ ಒಳಗಾಗುತ್ತೀರಿ. ಮನಸ್ಸಿನ ಮೇಲೆ ಬ್ರೇಕಪ್ ಊಹಿಸಲಾಗದ ಪರಿಣಾಮ ಬೀರುತ್ತದೆ.