ಪಪ್ಪಾಯಿ ಎಲೆಯ ರಸ ಸೇವಿಸುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?

Date:

ಪಪ್ಪಾಯಿ ಎಲೆಯ ರಸ ಸೇವಿಸುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?

ಸಾಮಾನ್ಯವಾಗಿ ಪಪ್ಪಾಯಿ ಹಣ್ಣು ಮಾತ್ರವಲ್ಲ, ಅದರ ಎಲೆಯಲ್ಲಿಯೂ ಔಷಧೀಯ ಗುಣಗಳನ್ನು ಹೇರಳವಾಗಿರುವುದರಿಂದ ಇದರ ಎಲೆಯನ್ನು ಜ್ಯೂಸ್ ಮಾಡಿ ಕುಡಿವವರೂ ಇದ್ದಾರೆ. ಪಪ್ಪಾಯಿ ಎಲೆಯ ರಸ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಬಳಸಲಾಗುವ ಅತ್ಯಂತ ದೇಸಿ ಪರಿಹಾರ. ಇದರ ವಿವಿಧ ಆರೋಗ್ಯ ಲಾಭಗಳಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ಇದು ಅಪಾರ ಜನಪ್ರಿಯತೆ ಗಳಿಸಿದೆ. ಇದರಲ್ಲಿ ಪಾಪೈನ್ ಮತ್ತು ಚಿಮೊಪಾಪೈನ್ ನಂತಹ ಕಿಣ್ವಗಳು ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಇತರ ಜೀರ್ಣಾಂಗಗಳ ಅಸ್ವಸ್ಥತೆಗಳನ್ನು ತಡೆಯುತ್ತದೆ. ಇದರಲ್ಲಿರುವ ಅಲ್ಕಾಲಾಯ್ಡ್ ಸಂಯುಕ್ತ, ತಲೆ ಮತ್ತು ಬೊಕ್ಕತಲೆಗಳ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿಯಾಗಿರುತ್ತದೆ.
ಪಪ್ಪಾಯಿ ಎಲೆಯ ರಸ ಕುಡಿಯುವುದರಿಂದ ಆಗುವ ಪ್ರಯೋಜನಗಳು;
• ಪಪ್ಪಾಯಿಯಲ್ಲಿ ಪೋಷಕಾಂಶಗಳು, ಫೈಬರ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಇದರಲ್ಲಿರುವ ಫೋಲಿಕ್ ಆಮ್ಲವು ದೇಹದಲ್ಲಿನ ಕೆಟ್ಟ ಅಮೈನೋ ಆಮ್ಲಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
• ಡೆಂಗ್ಯೂನಿಂದ ಜ್ವರ ಹೆಚ್ಚಾದಾಗ ಪಪ್ಪಾಯಿ ಎಲೆಯ ರಸವನ್ನು ಕುಡಿಯುವುದು ತುಂಬಾ ಒಳ್ಳೆಯದು. ಅಲ್ಲದೆ ಇದು ರಕ್ತದಲ್ಲಿ ಪ್ಲೇಟ್ಲೆಟ್ಗಳನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ.
• ಪಪ್ಪಾಯಿಯಂತೆ, ಇದರ ಎಲೆಯ ರಸವೂ ಕೂಡ ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು. ಅಲ್ಲದೆ ಈ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಮತ್ತು ಫೈಬರ್ ಇರುವುದರಿಂದ, ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ತುಂಬಾ ಸಹಾಯಕವಾಗಿವೆ.
• ಪಪ್ಪಾಯಿ ಎಲೆಯ ರಸದಲ್ಲಿರುವ ಕಿಣ್ವಗಳು ಉರಿಯೂತವನ್ನು ಕಡಿಮೆ ಮಾಡುತ್ತವೆ.
• ಈ ರಸದಲ್ಲಿ ಪಪೈನ್ ಕಡಿಮೆ ಇದ್ದು. ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದನ್ನು ಕುಡಿಯುವುದರಿಂದ ಫ್ರೀ ರಾಡಿಕಲ್ಗಳ ಅಪಾಯವನ್ನು ಕಡಿಮೆ ಮಾಡಬಹುದು.

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...