ಪಬ್ ಜೀ ಹುಚ್ಚು ಹಿಡಿಸಿಕೊಂಡವರ ಸಂಖ್ಯೆ ಮಿತಿ ಮೀರಿದೆ. ಪಬ್ ಜೀ ಆಟದಲ್ಲಿ ಮೈ ಮರೆತ ಎಷ್ಟೋ ಮಂದಿ ಕೆಲಸ ಕಾರ್ಯ ಬಿಟ್ಟು ಹಾಳಾಗ್ತಿದ್ದಾರೆ, ಹೀಗೆ ವಿದ್ಯಾರ್ಥಿ ಒಬ್ಬ ಪಬ್ ಜೀ ಆಡುವುದು ಬಿಟ್ಟು ಆಟ ಆಡು ಎಂದಿದ್ದಕ್ಕೇ ಸೂಸೈಡ್ ಮಾಡಿಕೊಂಡಿದ್ದಾನೆ.
10ನೇ ತರಗತಿ ಎಸ್ಎಸ್ಸಿ ಪರೀಕ್ಷೆಗೆ ಓದದೆ ಪಬ್ ಜೀ ವಿಡಿಯೋ ಗೇಮ್ ಆಡುತ್ತಿದ್ದುದ್ದಕ್ಕೆ ಪೋಷಕರು ಬೈಯ್ದಿದ್ದಾರೆ. ಅಷ್ಟಕ್ಕೇ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ನಡೆದಿರುವುದು ತೆಲಂಗಾಣದಲ್ಲಿ.
ತೆಲಂಗಾಣದ ಮಲ್ಕಾಜ್ ಗಿರಿಯ ವಿಷ್ಣುಪುರಿ ಎಕ್ಸ್ ಟೆನ್ಶನ್ ನಿವಾಸಿ 16 ವರ್ಷ ವಯಸ್ಸಿನ ಕಲ್ಲಕುರಿ ಸಾಂಬಶಿವ ಮೃತ. ಮಲ್ಕಾಜ್ ಗಿರಿಯ ಗೌತಮಿ ಶಾಲೆಯ ವಿದ್ಯಾರ್ಥಿಯಾಗಿದ್ದ ಸಾಂಬಶಿವ ತನ್ನ ಮನೆಯಲ್ಲಿ ಸೋಮವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ.
ವಿದ್ಯಾರ್ಥಿ ಸಾಂಬಶಿವನ ತಂದೆ ಅರ್ಚಕ ಭರತ್ ರಾಜ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಓದೋದು ಬಿಟ್ಟು ಪಬ್ ಜೀ ಗೇಮ್ ಆಡುತ್ತಿದ್ದ ಕಾರಣ ತನ್ನ ಪತ್ನಿ (ಮೃತ ವಿದ್ಯಾರ್ಥಿ ತಾಯಿ) ಉಮಾದೇವಿ ಬೈದಿದ್ದಕ್ಕೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೂರಿನಲ್ಲಿ ಭರತ್ ರಾಜ್ ತಿಳಿಸಿದ್ದಾರೆ.
ಪಬ್ ಜೀ ಆಡ್ಬೇಡ ಎಕ್ಸಾಮ್ಗೆ ಓದಿಕೋ ಎಂದಿದ್ದಕ್ಕೇ ಸೂಸೈಡ್ ಮಾಡಿಕೊಂಡ..!
Date: