ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಮೇಲೆ ಇಡಿ ದಾಳಿ ಪ್ರಕರಣ: DCM ಡಿಕೆಶಿ ಹೇಳಿದ್ದೇನು?
ಬೆಂಗಳೂರು:- ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ DCM ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ರನ್ಯಾ ಮದುವೆಗೆ ಪರಮೇಶ್ವರ್ 15- 20 ಲಕ್ಷ ರೂ. ಗಿಫ್ಟ್ ಕೊಟ್ಟಿರಬಹುದು. ಪರಮೇಶ್ವರ್ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಅವರು, ರನ್ಯಾಗೆ 15 ರಿಂದ 25 ಲಕ್ಷ ರೂ. ನೀಡಿದ್ದಾರಂತೆ. ಆಕೆಯ ಮದುವೆಗೆ ಗಿಫ್ಟ್ ಮಾಡಿರಬಹುದು. ನಾನು ಅವರ ಬಳಿ ಮಾತಾಡಿದ್ದೇನೆ ಎಂದಿದ್ದಾರೆ.
ಪರಮೇಶ್ವರ್ ಆರೋಗ್ಯವಾಗಿದ್ದು, ಕ್ಯಾಬಿನೆಟ್‌ಗೆ ಬರುತ್ತಾರೆ. ಅವರ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಅವರು ಗೌರವಾನ್ವಿತ ವ್ಯಕ್ತಿ, ನಾನು ಅವರ ಜೊತೆ ಇರುತ್ತೇನೆ. ಇನ್ನೂ, ರನ್ಯಾ ತಪ್ಪು ಮಾಡಿದ್ರೆ ಕ್ರಮ ಆಗಲಿ ಎಂದಿದ್ದಾರೆ.