ಪರಿಸರ ರಕ್ಷಣೆಗಾಗಿ ಅನೇಕರು ತಮ್ಮದೇಯಾದ ಮಾರ್ಗದಲ್ಲಿ ಜಾಗೃತಿ ಮೂಡಿಸುತ್ತಾರೆ. ಅಂಥಾ ಜಾಗೃತಿ ಅಭಿಯಾನಿಗಳು ಜಾಥಾ ಕೂಡ ಒಂದು. ಪರಿಸರ ಮತ್ತು ನೀರನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ರಾಜಸ್ಥಾನದ ಯುವಕ ನರ್ಪತ್ ಸಿಂಗ್ ಎಂಬುವವರು ಸೈಕಲ್ ಯಾತ್ರೆ ಹೊರಟಿದ್ದು, ತಮಿಳುನಾಡು ಮುಖೇನ ಮಂಗಳೂರಿಗೆ ಬಂದಿರುವ ಇವರ ಜಲ ಸಂರಕ್ಷಣೆ ಪ್ರೀತಿ ಮೆಚ್ಚುವಂಥಾದ್ದು.
2019ರ ಜನವರಿ 27ರಂದು ಜಮ್ಮು ವಿಮಾನ ನಿಲ್ದಾಣದಿಂದ ಸೈಕಲ್ ಅಭಿಯಾನ ಆರಂಭಿಸಿರುವ ನರ್ಪತ್ ಸುಮಾರು 24 ಸಾವಿರ ಕಿಲೋ ಮೀಟರ್ ಯಾತ್ರೆ ಮಾಡುವ ಗುರಿ ಹೊಂದಿದ್ದಾರಂತೆ.
ಈಗಾಗಲೇ ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟç, ಗೋವಾ, ತಮಿಳುನಾಡುಗಳಲ್ಲಿ ಸಂಚರಿಸಿ ಅಲ್ಲಿ ಜಲಸಂರಕ್ಷಣೆ ಕುರಿತಾಗಿ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕರಲ್ಲಿ ಪರಿಸರ ಕುರಿತು ಜನಜಾಗೃತಿ ಮೂಡಿಸಿ ಪ್ರಸ್ತುತ ಮಂಗಳೂರಿಗೆ ಬಂದಿದ್ದು, ಗುರುವಾರ ಇಲ್ಲಿಂದ ಕೇರಳಕ್ಕೆ ಪ್ರವಾಸ ಹೊರಟಿದ್ದಾರೆ.
ಸೈಕಲ್ ಮೂಲಕ ನಡೆಸುವ ಅಭಿಯಾನದ ಮೂಲಕ ದೇಶದ ಆಯಾ ಪ್ರದೇಶದ ಮಂದಿಗೆ ನೀರು, ಪರಿಸರ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಾರೆ. ಅಲ್ಲದೆ, ಪ್ರತಿದಿನ ಅವರು ಹೋದ ಪ್ರದೇಶದಲ್ಲಿ ಎರಡು ಅಥವಾ ಮೂರು ಗಿಡಗಳು ಅಥವಾ ಗಿಡಗಳ ಬೀಜಗಳನ್ನು ನೆಡುತ್ತಾರೆ.
ಬಾಲ್ಯದಲ್ಲಿ ರಾಜಸ್ಥಾನದ ಬಾಲ್ಮರ್ ಜೈಸಲ್ಮೇರ್ ಜೋಧುರ ಪ್ರದೇಶದಲ್ಲಿ ಸಾಕಷ್ಟು ನೀರು ಇತ್ತು. ಆದರೆ ಕಾಲಕ್ರಮೇಣ ನೀರು ತೀವ್ರವಾಗಿ ಇಳಿಮುಖವಾಗಿ ಈ ಪ್ರದೇಶ ಬರಗಾಲಕ್ಕೆ ತುತ್ತಾಗಿರುವುದು ಕಂಡು ನೊಂದಿರುವ ನರ್ಪತ್ ಎಲ್ಲೂ ನೀರಿನ ಸಮಸ್ಯೆ ಕಾಡಬಾರದು ಎಂದು ಜಾಗೃತಿ ಮೂಡಿಸಲು ವಿಶ್ವಪರ್ಯಟನೆ ಹೊರಟಿದ್ದಾರೆ.
ಪರಿಸರ ಜಾಗೃತಿ ಮೂಡಿಸಲು ಯುವಕ ಸೈಕಲ್ನಲ್ಲಿ ದೇಶ ಸಂಚಾರ..!
Date: