ಮಂಗಳೂರು: ಅಮೆರಿಕದ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಟೀಮ್ ಇಂಡಿಯಾ- ಪಾಕಿಸ್ತಾನ ಮಧ್ಯೆ ಹೈವೋಲ್ಟೇಜ್ ಪಂದ್ಯ ಇಂದು ನಡೆಯಲಿದೆ. ಇದಕ್ಕಾಗಿ 2 ಕಡೆಯ ಆಟಗಾರರು ನೆಟ್ಸ್ನಲ್ಲಿ ಸಖತ್ ತಯಾರಿ ನಡೆಸುತ್ತಿದ್ದಾರೆ. ಇನ್ನೂ ಬಗ್ಗೆ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರೀಯೇ ನೀಡಿದ್ದಾರೆ. ನ್ಯೂಯಾರ್ಕ್ನಲ್ಲಿ ಇಂಡಿಯಾ – ಪಾಕಿಸ್ತಾನದ ನಡುವೆ ಟಿ-20 ವರ್ಲ್ಡ್ ಕಪ್ ಕ್ರಿಕೆಟ್ ಮ್ಯಾಚ್ ನಡೆಯಲಿರುವ ಹಿನ್ನೆಲೆಯಲ್ಲಿ,
“ಹಿಂದೆ ಪಾಕಿಸ್ತಾನದವರು ಕ್ರಿಕೆಟ್ ಆಟವಾಡಲು ಬಂದ ವೇಳೆ ಪಿಚ್ ಅಗೆದಿದ್ದಾರೆ. ವಿನಾಕಾರಣ ಪ್ರತಿಭಟನೆ ಮಾಡಿದ್ದರು. ಆದ್ದರಿಂದ ಎಲ್ಲಿಯವರೆಗೆ ನಮಗೆ ಅವರು ತೊಂದರೆ ಕೊಡುತ್ತಾರೋ, ಅಲ್ಲಿಯವರೆಗೆ ನಾವು ಅವರೊಂದಿಗೆ ಆಟವಾಡಬಾರದು” ಎಂದು ಹೇಳಿದರು.
ಎರಡೂ ದೇಶಗಳ ನಡುವೆ ಸಂಚಾರ ಮಾಡುವುದನ್ನೂ ನಿಲ್ಲಿಸಲಾಗಿದೆ. ಅಲ್ಲದೆ ಅವರು ನಮ್ಮಲ್ಲಿಗೆ ಬಂದು ಆಟವಾಡುವುದನ್ನೂ ನಿಲ್ಲಿಸಲಾಗಿದೆ. ಇಷ್ಟಾದ ಮೇಲೆ ಪಾಕಿಸ್ತಾನದ ಆಟಗಾರರನ್ನು ದುಬೈ, ನ್ಯೂಯಾರ್ಕ್ಗೆ ಕರೆದೊಯ್ದು ಅಲ್ಲಿ ಅವರೊಂದಿಗೆ ಭಾರತದ ಆಟಗಾರರು ಆಡುವುದೆಂದರೆ ಏನರ್ಥ?.
ಎಲ್ಲಿಯವರೆಗೆ ಪಾಕ್ನವರು ಭಾರತ ಹೇಳುವುದನ್ನು ಕೇಳುವುದಿಲ್ಲವೋ ಅಲ್ಲಿಯವರೆಗೆ ಅವರೊಂದಿಗೆ ಆಟವಾಡುವುದು ಬೇಡ. ಅವರೊಂದಿಗೆ ಆಟವಾಡದಿದ್ದರೆ ಕ್ರಿಕೆಟ್ ಆಟ ಮುಂದೆ ಹೋಗುದಿಲ್ಲವೇ?” ಎಂದು ಪ್ರಶ್ನಿಸಿದರು. ಇಂದಿನ ಪಂದ್ಯದ ಮೇಲೆ ಎಲ್ಲರ ನಿರೀಕ್ಷೆ ಇದೆ. ಅದರಲ್ಲೂ ಭಾರತ ಸರಳವಾಗಿ ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ. ಆದರೂ ಇಂದು ಸಂಜೆ ನಡೆಯುತ್ತಿರುವ ಪಂದ್ಯವನ್ನು ಕಾಣಲು ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ.
ಪಾಕಿಸ್ತಾನದ ಜೊತೆ ಭಾರತ ಕ್ರಿಕೆಟ್ ಆಡಬಾರದು: ಯು.ಟಿ. ಖಾದರ್
Date: