ಪುದೀನಾ ಎಲೆಗಳಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳೇನು ಗೊತ್ತಾ..?

tnit editors
2 Min Read

ಪುದೀನಾ ಎಲೆಗಳಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳೇನು ಗೊತ್ತಾ..?

ಮನೆ ಮದ್ದಿನಲ್ಲಿ ಪುದೀನ ಎಲೆಯನ್ನು ವಿಶೇಷವಾಗಿ ಬಳಸಲಾಗುವುದು. ಇದರಲ್ಲಿ ಇರುವ ಔಷಧೀಯ ಗುಣಗಳು ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ. ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಹೊಂದಿರುವುದು. . ಪುದೀನ ಬಳಸುವುದರ ಮೂಲಕ ಯಾವೆಲ್ಲಾ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು? ಇಲ್ಲಿದೆ ಮಾಹಿತಿ
ಪುದೀನಾ ಎಲೆಗಳನ್ನು ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳು:
• ಪ್ರತಿದಿನ ಕನಿಷ್ಠ 5- 6 ಪುದೀನಾ ಎಲೆಗಳನ್ನು ಜಗಿದು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.
• ಈ ಎಲೆಯ ರಸ ಅಥವಾ ಇದನ್ನು ಸೇರಿಸಿ ಮಾಡಿದ ಆಹಾರಗಳ ನಿಯಮಿತ ಸೇವನೆಯು ಎದೆಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಪುದೀನಾದಲ್ಲಿರುವ ಮೆಂಥೋಲ್ ಡಿಕಾಂಗಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಶ್ವಾಸಕೋಶದಲ್ಲಿ ಸಂಗ್ರಹವಾದ ಲೋಳೆಯನ್ನು ಹೊರಹಾಕುತ್ತದೆ. ಇದರಿಂದ ಸುಲಭವಾಗಿ ಉಸಿರಾಡಬಹದು.
• ಪುದೀನಾದ ಔಷಧೀಯ ಗುಣಗಳು ಮತ್ತು ಅದರ ಸುವಾಸನೆ ಅರೋಮಾಥೆರಪಿಗೆ ಸಹಾಯ ಮಾಡುತ್ತದೆ. ಅದರಲ್ಲಿರುವ ಉಲ್ಲಾಸದಾಯಕ ಪರಿಮಳ ನಿಮಗೆ ಬೇಗನೆ ಶಾಂತ ಮತ್ತು ಉಲ್ಲಾಸದ ಭಾವನೆಯನ್ನು ನೀಡುತ್ತದೆ. ಪುದೀನಾ ರಸದ ಸುವಾಸನೆ ಮಾನಸಿಕ ಒತ್ತಡ, ಖಿನ್ನತೆಯನ್ನು ತ್ವರಿತವಾಗಿ ನಿವಾರಿಸುತ್ತದೆ.
• ಪುದೀನಾ ಎಲೆಗಳನ್ನು ಜಗಿದು ತಿನ್ನುವುದರಿಂದ ಬಾಯಿಯ ನೈರ್ಮಲ್ಯ ಮತ್ತು ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ನಾಲ್ಕರಿಂದ ಐದು ಪುದೀನಾ ಎಲೆಗಳನ್ನು ಜಗಿಯುವುದರಿಂದ ಹಲ್ಲುನೋವು, ದವಡೆ ರಕ್ತಸ್ರಾವವನ್ನು ತಡೆಯಬಹುದು. ಜೊತೆಗೆ ಇದು ಒಸಡುಗಳನ್ನು ಬಲಪಡಿಸುತ್ತದೆ ಮತ್ತು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ.
• ಪುದೀನಾ ಎಲೆಗಳನ್ನು ವಿವಿಧ ರೀತಿಯಲ್ಲಿ ಬಳಸುವುದರಿಂದ ಚರ್ಮದ ಕಾಯಿಲೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.
• ಪುದೀನಾ ಎಲೆಗಳ ರಸವನ್ನು ಜೇನುತುಪ್ಪ ಅಥವಾ ಕೆಂಪು ಕಲ್ಲು ಸಕ್ಕರೆ ಮತ್ತು ನಿಂಬೆ ರಸದೊಂದಿಗೆ ಬೆರೆಸಿ ಸೇವಿಸುವುದರಿಂದ ಆಯಾಸ, ಆಲಸ್ಯ ಮತ್ತು ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಅಲ್ಲದೆ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.
• ಜಜ್ಜಿದ ಪುದೀನಾ ಎಲೆಗಳು ತಲೆನೋವು ಮತ್ತು ತಲೆ ತಿರುಗುವಿಕೆಯನ್ನು ನಿವಾರಿಸುತ್ತದೆ. ಜೇನುತುಪ್ಪದೊಂದಿಗೆ ಪುದೀನಾ ಕಷಾಯವನ್ನು ಕುಡಿಯುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

Share This Article