ಪುನೀತ್ ಹಾಡಿಗೆ ಸ್ಟೆಪ್ ಹಾಕಿದ ಗಣೇಶ್ & ದಿಗಂತ್!

admin
1 Min Read

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದಿಗಂತ್ ಹಲವಾರು ವರ್ಷಗಳ ನಂತರ ಮತ್ತೆ ಗಾಳಿಪಟ 2ಚಿತ್ರದ ಮೂಲಕ ಒಂದಾಗಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಇತ್ತೀಚೆಗಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ಇನ್ಸ್ಟಾಗ್ರಾಮ್ ಟೈಲ್ಸ್ ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾರೆ.

 

 

 

ಗಾಳಿಪಟ 2ಚಿತ್ರದ ಚಿತ್ರೀಕರಣದ ದೃಶ್ಯವನ್ನು ಹಂಚಿಕೊಂಡಿರುವ ಗಣೇಶ್ ಅವರು ದಿಗಂತ್ ಅವರ ಜೊತೆ ಸ್ಟೆಪ್ ಹಾಕಿದ್ದಾರೆ. ಪುನೀತ್ ಅಭಿನಯದ ಪರಮಾತ್ಮ ಚಿತ್ರದ ಯಾವನಿಗ್ ಗೊತ್ತು ಹಾಡಿಗೆ ದಿಗಂತ್ ಮತ್ತು ಗಣೇಶ್ ಅವರು ಸ್ಟೆಪ್ ಹಾಕಿರುವ ವಿಡಿಯೋವನ್ನು ಇನ್ ಸ್ಟಾಗ್ರಾಮ್ನಲ್ಲಿ ಗಣೇಶ್ ಅವರು ಪೋಸ್ಟ್ ಮಾಡಿದ್ದಾರೆ. ಮಂಜಿನ ನಡುವೆ ಯಾವನಿಗ್ ಗೊತ್ತು ಹಾಡಿಗೆ ಸ್ಟೆಪ್ ಹಾಕಿರುವ ಗಣೇಶ್ ಮತ್ತು ದಿಗಂತ್ ಅವರ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

Share This Article
Leave a Comment