ಪೆಟ್ರೋಲ್ ಬಂಕ್ ನಲ್ಲಿ ಜಿಲ್ಲರೆ ಕಿರಿಕ್: ಪರಸ್ಪ ಬಡಿದಾಡಿಕೊಂಡ ಯುವಕರು!
ಗದಗ:- ಪೆಟ್ರೋಲ್ ಬಂಕ್ ಒಂದರಲ್ಲಿ ಚಿಲ್ಲರೆ ಕಿರಿಕ್ ನಡೆದಿದ್ದು, ಯುವಕರು ವಾಗ್ವಾದ ನಡೆಸಿ ಪರಸ್ಪರ ಬಡಿದಾಡಿಕೊಂಡ ಘಟನೆ
ಗದಗ ತಾಲೂಕಿನ ಹರ್ತಿ ಬಳಿ ಪೆಟ್ರೋಲ್ ಬಂಕಿನಲ್ಲಿ ನಡೆದಿದೆ.
ಪೆಟ್ರೋಲ್ ಬಂಕ್ ಸಿಬ್ಬಂದಿಗಳಾದ
ಮಾಹಾಂತೇಶ ಹೊನ್ನಪ್ಪನವರ್ ಹಾಗೂ ರವಿ ಬಂಡಿವಡ್ಡರ್ ಎಂಬುವರಿಗೆ ಹರ್ತಿ ಗ್ರಾಮದ ಹಲವು ಯುವಕರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಒರ್ವ ಗ್ರಾಹಕನು ತನ್ನ ಬೈಕಿಗೆ 100 ರೂಪಾಯಿ ಕೊಟ್ಟು 50 ರೂಪಾಯಿ ಪೆಟ್ರೋಲ್ ಹಾಕಿಸಿದ್ದಾನೆ. ಇನ್ನುಳಿದ 50 ರೂಪಾಯಿ ಕೊಡಲು ಚೇಂಜ್ ಇಲ್ಲದಕ್ಕೆ ತಡಮಾಡಿದ ಬಂಕ್ ಸಿಬ್ಬಂದಿಗಳ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿದ್ದಾರೆ.
ಘಟನೆ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.






