ಪೊಗರು ಚಿತ್ರಕ್ಕೆ ರಶ್ಮಿಕಾ ಮೋಸ!?

Date:

ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಅಭಿನಯಿಸಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಪೊಗರು ಚಿತ್ರ ಫೆಬ್ರವರಿ 19ರಂದು ಬಿಡುಗಡೆಯಾಗುತ್ತಿದ್ದು ಎಲ್ಲಡೆ ಭರ್ಜರಿಯಾಗಿ ಪ್ರಚಾರ ನಡೆಯುತ್ತಿದೆ. ನಟ ಧ್ರುವ ಸರ್ಜಾ ಅವರು ಲೈವ್ ಬರುವ ಮೂಲಕ ಪೊಗರು ಚಿತ್ರ ಬಿಡುಗಡೆಯಾಗುತ್ತಿದೆ ನೀವೆಲ್ಲರೂ ಪ್ರೀತಿಯಿಂದ ನೋಡಿ ಆಶೀರ್ವದಿಸಿ ಎಂದು ಕೇಳಿಕೊಂಡರು.

 

 

ಆದರೆ ನಟಿ ರಶ್ಮಿಕಾ ಮಂದಣ್ಣ ಮಾತ್ರ ತಮ್ಮ ಚಿತ್ರವಾದರೂ ಸಹ ಪೊಗರು ಚಿತ್ರದ ಬಗ್ಗೆ ಯಾವುದೇ ರೀತಿಯ ಒಲವನ್ನ ತೋರಿಸುವಂತೆ ಕಾಣುತ್ತಿಲ್ಲ. ಹೌದು ನಟಿ ರಶ್ಮಿಕಾ ಮಂದಣ್ಣ ಪೊಗರು ಚಿತ್ರದ ಪ್ರಚಾರಗಳಲ್ಲಿ ತೊಡಗಿಸಿಕೊಂಡಿಲ್ಲ. ಇತ್ತೀಚೆಗೆ ವಿಜಯ್ ದೇವರಕೊಂಡ ಅವರ ಲಿಗರ್ ಚಿತ್ರದ ಫಸ್ಟ್ ಕಮ್ ಬಿಡುಗಡೆಯಾಯಿತು. ಈ ಚಿತ್ರದ ಪೋಸ್ಟರ್ ಬಗ್ಗೆ ರಶ್ಮಿಕ ಮಂದಣ್ಣ ಅವರು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಆದರೆ ತಮ್ಮದೇ ಪೊಗರು ಚಿತ್ರದ ಬಗ್ಗೆ ಪೋಸ್ಟ್ ಹಾಕಲು ರಶ್ಮಿಕಾ ಮಂದಣ್ಣ ಅವರ ಬಳಿ ಸಮಯವಿಲ್ಲ ಬಿಡಿ.

 

https://twitter.com/iamRashmika/status/1351056573767028737?s=19

 

ತೆಲುಗು ಚಿತ್ರವೊಂದಕ್ಕೆ ಪ್ರಚಾರಮಾಡಲು ರೆಡಿಯಾಗಿರುವ ರಶ್ಮಿಕಾ ಮಂದಣ್ಣ ಅವರು ತಾವೇ ಅಭಿನಯಿಸಿರುವ ತಮಗೆ ಅನ್ನ ಕೊಟ್ಟ ಕನ್ನಡ ಸಿನಿಮಾರಂಗದ ಚಿತ್ರದ ಬಗ್ಗೆ ಪೋಸ್ಟ್ ಮಾಡಲು ಹಿಂದೆ ಮುಂದೆ ನೋಡುತ್ತಿರುವುದು ನಿಜಕ್ಕೂ ಆಕ್ಷೇಪಾರ್ಹ.. ಇತ್ತೀಚಿಗಷ್ಟೇ ಕೇವಲ ಒಂದೇ ಒಂದು ಪೋಸ್ಟ್ ಅನು ಪೊಗರು ಕುರಿತಾಗಿ ರಶ್ಮಿಕಾ ಮಂದಣ್ಣ ಅವರ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ. ಈ ಪೋಸ್ಟ್ ಗೂ ಸಹ ಕನ್ನಡಿಗರು ಖಾರವಾಗಿ ಪ್ರತಿಕ್ರಿಯಿಸುತ್ತಿದ್ದು, ಮನಸ್ಸಿನಿಂದ ಕನ್ನಡ ಚಿತ್ರದ ಬಗ್ಗೆ ಹಾಕಿಕೊಳ್ಳಿ, ಬೇಕಾಬಿಟ್ಟಿಯಾಗಿ ಪೋಸ್ಟ್ ಹಾಕಬೇಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ..

Share post:

Subscribe

spot_imgspot_img

Popular

More like this
Related

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...